
ನವದೆಹಲಿ(ಆ. 06) ಮಧ್ಯಪ್ರದೇಶದ ರತ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಗುಮಾನ್ ಸಿಂಗ್ ದಾಮೋರ್ ಇಂಥ ಒತ್ತಾಯ ಮಾಡಿದ್ದಾರೆ. ನರೇಂದ್ರ ಮೋದಿ ದಿಟ್ಟ ನಿರ್ಧಾರಗಳಿಗೆ ಹೆಸರಾಗಿದ್ದಾರೆ. ಆರ್ಟಿಕಲ್ 370 ರದ್ದು ಮಾಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಗುಮಾಂನ್ ಸಿಂಗ್, ನರೇಂದ್ರ ಮೋದಿ ಒಬ್ಬ ಯುಗಪುರುಷ, ಕೋಟ್ಯಂತರ ಭಾರತೀಯರು ಸಂತಸಪಡುವಂತಹ ನಿರ್ಧಾರ ತೆಗೆದುಕೊಂಡಿದ್ದು ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ ಎಂದಿದ್ದಾರೆ.
ಆರ್ಟಿಕಲ್ 370 ರದ್ದು: ಮೊದಲು ಏನಿತ್ತು? ಈಗ ಏನಾಗಿದೆ? ತಿಳಿದುಕೊಳ್ಳಲೇಬೇಕು
ಶೂನ್ಯ ವೇಳೆಯಲ್ಲಿ ಒಟ್ಟು 74 ಜನ ಸದಸ್ಯರು ಮಾತನಾಡಿದರು. ಬಿಜೆಪಿಯ ರವಿ ಕಿಶನ್, ಪ್ರಗ್ಯಾ ಸಿಂಗ್ ಠಾಕೂರ್, ವಿಜಯ್ ಕುಮಾರ್ ದುಬೇ, ವಿಷ್ಣುದತ್ತ ಶರ್ಮಾ ಸೇರಿದಂತೆ ಅನೇಕು ಮೋದಿ ಮತ್ತು ಅಮಿತ್ ಶಾ ಅವರ ತೀರ್ಮಾನವನ್ನು ಐತಿಹಾಸಿಕ ಎಂದು ಬಣ್ಣಿಸಿದರು.
ಮೋದಿ ಅವರಿಗೆ ರಷ್ಯಾದ ಪ್ರತಿಷ್ಠಿತ ಆರ್ಡರ್ ಆಫ್ ಸಂತ್ ಆಂಡ್ರ್ಯೂ, ಯುಎಇ ಜಯೇದ್ ಮಡಲ್, ಪಿಲಿಫ್ ಕೊಲ್ಟೆರ್ ಪ್ರೆಸಿಡೆನ್ಶಿಯಲ್ ಅವಾರ್ಡ್, ಸೋಯೋಲ್ ಶಾಂತಿ ಪುರಸ್ಕಾರಗಳಿಂದ ಮೋದಿ ಗೌರವಾನ್ವಿತರಾಗಿದ್ದಾರೆ.
ಆಪರೇಶನ್ ಕಾಶ್ಮೀರ: ಆರಂಭದಿಂದ ಅಂತ್ಯದವರೆಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.