ಮದುವೆ ಮನೆಯಲ್ಲಿ ಹಣದ ಮಳೆ/ ಮೆರವಣಿಗೆ ತುಂಬೆಲ್ಲಾ ನೋಟಿನ ಸುರಿಮಳೆ/ 90 ಲಕ್ಷ ರೂ. ಗೂ ಅಧಿಕ ಹಣದ ಮಳೆ/ ಗಾಂಧಿನಗರದ ಅದ್ದೂರಿ ಮದುವೆ ವಿಡಿಯೋ ವೈರಲ್
ಗಾಂಧಿನಗರ(ಡಿ. 02) ಅದು ಅಂತಿಂಥ ಮದುವೆ ಮೆರವಣಿಗೆ ಅಲ್ಲ. ಅಲ್ಲಿ ಹಣದ ಮಳೆಯೇ ಆಗಿತ್ತು. ವಧು-ವರರ ಶ್ರೀಮಂತಿಕೆಯ ಅನಾವರಣ ಆಗಿದೆ.
ಮದುವೆ ಮೆರವಣಿಗೆಯಲ್ಲಿ ಬರೋಬ್ಬರಿ 90 ಲಕ್ಷ ರೂ. ಗೂ ಅಧಿಕ ಹಣದ ಮಳೆ ಸುರಿದಿದೆ. ಗುಜರಾತಿನ ಜಾಮ್‍ನಗರದ ಈ ಅದ್ದೂರಿ ಮದುವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದು ನವೆಂಬರ್ 30 ರಂದು ನಡೆದ ಘಟನೆ ಎನ್ನಲಾಗಿದೆ. ಮದುವೆಮನೆಗೆ ವರ ಮೆರವಣಿಗೆ ಮೂಲಕ ಹೋಗುತ್ತಿದ್ದನು. ಈ ವೇಳೆ ವರನ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆಯುದ್ದಕ್ಕೂ ಹಣದ ಮಳೆ ಗೈದು ಸಂಭ್ರಮಿಸಿದ್ದಾರೆ. ಚೇಲಾ ಗ್ರಾಮದ ಜಡೇಜಾ ಕುಟುಂಸ್ಥರಿಗೆ ಸೇರಿದ್ದ ಮದುವೆ ಇದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತನ್ನ ಮದುವೆಗೆ ಕೆಲವೇ ಗಂಟೆ ಇದ್ದಾಗ ಓಡೋಡಿ ಬಂದ ಅಂತಾರಾಷ್ಟ್ರೀಯ ಕ್ರಿಕೆಟಿಗ
2 ಸಾವಿರ ಹಾಗೂ 500 ರೂ. ನೋಟುಗಳನ್ನು ಎಸೆಯಲಾಗಿದೆ. ಹಣ ಎಸೆದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಾತುಗಳು ಕೇಳಿ ಬಂದಿವೆ. ವಧು-ವರರನ್ನು ಹೆಲಿಕಾಪ್ಟರ್ ಮೂಲಕ ಕರೆತಂದಿದ್ದು ಮತ್ತಷ್ಟು ವಿಶೇಷ.