ಸಿಯಾಚಿನ್‌ ಯುದ್ಧ ಭೂಮಿ ಇನ್ನು ಸಾಮಾನ್ಯರಿಗೂ ಮುಕ್ತ!

Published : Sep 25, 2019, 08:43 AM IST
ಸಿಯಾಚಿನ್‌  ಯುದ್ಧ ಭೂಮಿ ಇನ್ನು ಸಾಮಾನ್ಯರಿಗೂ ಮುಕ್ತ!

ಸಾರಾಂಶ

ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ ಇನ್ನು ಸಾಮಾನ್ಯರಿಗೂ ಮುಕ್ತ! ಜನ ಸಾಮಾನ್ಯರ ಭೇಟಿಗೆ ಅವಕಾಶ ನೀಡಲು ಸೇನೆ ಯೋಜನೆ ಯೋಧರ ಸವಾಲುಗಳ ಬಗ್ಗೆ ಜನರಿಗೆ ಮನ್ನದಟ್ಟಾಗಲು ಈ ಕ್ರಮ | ಕೆಲ ತರಬೇತಿ ಕೇಂದ್ರಗಳ ಭೇಟಿಗೆ ಜನತೆಗೆ ಈಗಾಗಲೇ ಅವಕಾಶ

ನವದೆಹಲಿ (ಸೆ. 25): ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಅನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ, ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಖ್ಯಾತಿಯ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸುವ ಮಹತ್ವದ ನಿರ್ಧಾರಕ್ಕೆ ಭಾರತೀಯ ಸೇನೆ ನಿರ್ಧರಿಸಿದೆ.

ಕೊರೆಯುವ ಚಳಿಯಲ್ಲಿ ಪ್ರತಿನಿತ್ಯ ಯೋಧರ ಸಂಕಷ್ಟಗಳು ಹಾಗೂ ಅವರು ಎದುರಿಸುವ ಸವಾಲುಗಳನ್ನು ದೇಶದ ಜನತೆ ಸ್ವತಃ ಮನಗಾಣಬೇಕೆಂಬ ಸಲುವಾಗಿ ಸಾರ್ವಜನಿಕರಿಗೂ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶವನ್ನು ಮುಕ್ತಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ದೇಶಾದ್ಯಂತ ಶೀಘ್ರ ಖಾಸಗಿ ರೈಲುಗಳ ಸೇವೆ ಆರಂಭ?

ಸೇನೆಯ ಜೀವನ ಮತ್ತು ಅದು ಅನುಸರಿಸುವ ಮಾರ್ಗೋಪಾಯಗಳ ಬಗ್ಗೆ ಸಾರ್ವಜನಿಕರು ತೀವ್ರ ಆಸಕ್ತದಾಯಕ ಅಭಿಲಾಶೆ ಬೆಳೆಸಿಕೊಂಡಿದ್ದಾರೆ ಎಂದು ಭೂ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಸ್ಥಳೀಯರ ಹೊರತುಪಡಿಸಿ ಉಳಿದವರಾರ‍ಯರಿಗೂ ಸಿಯಾಚಿನ್‌ ಭೇಟಿಗೆ ಅವಕಾಶವಿಲ್ಲ. ಆದರೆ, ಇದೀಗ ಅತಿ ಎತ್ತರದ ಪ್ರದೇಶದಲ್ಲಿರುವ ಸಿಯಾಚಿನ್‌, ಲಡಾಖ್‌ ಯುದ್ಧ ಭೂಮಿಗಳಿಗೆ ಭೇಟಿ ನೀಡುವ ಅವಕಾಶವನ್ನು ಸಾಮಾನ್ಯ ಜನರಿಗೂ ಕಲ್ಪಿಸಲು ಸೇನೆ ಮುಂದಾಗಿದೆ. ಇದಕ್ಕಾಗಿ ಸಾರ್ವಜನಿಕರು ಇನ್ನಿತರ ಯಾವೆಲ್ಲಾ ಯುದ್ಧ ಭೂಮಿಗಳಿಗೆ ಭೇಟಿ ನೀಡಬಹುದಾಗಿದೆ ಎಂಬುದರ ಪ್ರಕ್ರಿಯೆಯನ್ನು ಕೈಗೊಂಡಿದೆ ಎನ್ನಲಾಗಿದೆ.

ನಿವೃತ್ತಿ ವಯಸ್ಸು ಇಳಿಸಲು ಕೇಂದ್ರ ಸರ್ಕಾರ ಚಿಂತನೆ

ಸಿಯಾಚಿನ್‌ ಬಗ್ಗೆ ಏನೆಲ್ಲಾ ಗೊತ್ತು?

ಲಡಾಖ್‌ ಭಾಗದ ಹಿಮಾಲಯದ ಪೂರ್ವ ಕಾರಕೊರಂನಲ್ಲಿರುವ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌

ಸಮುದ್ರದ ಮಟ್ಟದಿಂದ 18,875 ಕಿ.ಮೀ ಎತ್ತರ

1984ರಿಂದಲೂ ಸಿಯಾಚಿನ್‌ನ ಬಹುತೇಕ ಕಣಿವೆಗಳು ಭಾರತದ ವ್ಯಾಪ್ತಿಯಲ್ಲಿ

35 ಅಡಿ ಎತ್ತರ- ಚಳಿಗಾಲದಲ್ಲಿ ಮಂಜುಗಡ್ಡೆ ಆವರಿಸುವ ಪ್ರಮಾಣ

-50 ಡಿಗ್ರಿ ಸೆಲ್ಸಿಯಸ್‌- ಸಿಯಾಚಿನ್‌ನಲ್ಲಿನ ವಾತಾವರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!