ರಾಷ್ಟ್ರೀಯ ರೈಫಲ್ಸ್ ಪ್ರಧಾನ ಕಛೇರಿ ಮೇಲೆ ಉಗ್ರರ ದಾಳಿ

By Suvarna Web DeskFirst Published Aug 12, 2017, 10:48 AM IST
Highlights

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕಾಲಾರೂಸ್’ನಲ್ಲಿರುವ  41 ರಾಷ್ಟ್ರೀಯ ರೈಫಲ್ಸ್’ನ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ಏಕಾಏಕಿ ರಾಷ್ಟ್ರೀಯ ರೈಫಲ್ಸ್’ನ ಪ್ರಧಾನ ಕಛೇರಿಯ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ದಾಳಿ ಮುಂದುವರೆದಿದ್ದು, ಭದ್ರತಾ ಪಡೆ ಸಿಬ್ಬಂದಿ ಕೂಡಾ ಪ್ರತಿದಾಳಿಯನ್ನು ನಡೆಸಿದೆ.

ಕುಪ್ವಾರ, ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕಾಲಾರೂಸ್’ನಲ್ಲಿರುವ  41 ರಾಷ್ಟ್ರೀಯ ರೈಫಲ್ಸ್’ನ ಪ್ರಧಾನ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಉಗ್ರರು ಏಕಾಏಕಿ ರಾಷ್ಟ್ರೀಯ ರೈಫಲ್ಸ್’ನ ಪ್ರಧಾನ ಕಛೇರಿಯ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ದಾಳಿ ಮುಂದುವರೆದಿದ್ದು, ಭದ್ರತಾ ಪಡೆ ಸಿಬ್ಬಂದಿ ಕೂಡಾ ಪ್ರತಿದಾಳಿಯನ್ನು ನಡೆಸಿದೆ.

ರಾಷ್ಟ್ರೀಯ ರೈಫಲ್ಸ್ ಪ್ರಧಾನ ಕಛೇರಿಯ ಬಳಿ 21-ಜಮ್ಮು ಮತ್ತು ಕಾಶ್ಮೀರ ರೈಫಲ್ಸ್’ನ ಕ್ಯಾಂಪ್ ಕೂಡಾ ಇದ್ದು, ಅದಕ್ಕೆ ಸೇರಿದ ಯೋಧನೊಬ್ಬ ಗಾಯಗೊಂಡಿದ್ದಾನೆ. ಗಾಯಗೊಂಡ ಯೋಧನನ್ನು ಡ್ರಗ್ಮುಲ್ಲಾ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಗ್ರರಿಗಾಗಿ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ. ಕಾಲಾರೂಸ್ ಅರಣ್ಯ ಪ್ರದೇಶ, ಕುನ್ನಾಡ್, ಕಾನಿ ಬೆಹಕ್ , ಮನಿಘಾ ಪ್ರದೇಶಗಳನ್ನು ಭದ್ರತಾ ಪಡೆಗಳು ಸುತ್ತುವರೆದಿವೆ.

ಶನಿವಾರ ಮುಂಜಾನೆ ಪಾಕ್ ಪಡೆಗಳು ಮೇಂಡಾರ್ ಸೆಕ್ಟರ್’ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

(ಸಾಂದರ್ಭಿಕ ಚಿತ್ರ)

click me!