ಮಾಜಿ ಸಿಎಂ, ಪುತ್ರನಿಗಿದ್ದ Z+ ಸೆಕ್ಯೂರಿಟಿ ಹಿಂಪಡೆದ ಸಿಎಂ

By Web Desk  |  First Published Jun 26, 2019, 5:33 PM IST

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ 8 ಕೋಟಿ ರೂ. ವೆಚ್ಚದ ಪ್ರಜಾ ವೇದಿಕೆ ಕಟ್ಟಡವನ್ನು ಧ್ವಂಸಗೊಳಿಸಿದೆ. ಇದರ ಬೆನ್ನಲ್ಲೇ ಈಗ ನಾಯ್ಡು ಹಾಗೂ ಪುತ್ರನಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಜಗನ್‌ಮೋಹನ್ ರೆಡ್ಡಿ ಸರ್ಕಾರ ಹಿಂಪಡೆದುಕೊಂಡಿದೆ.


ಅಮರಾವತಿ, (ಜೂ.26):  ತೆಲುಗುದೇಶಂ ವರಿಷ್ಠ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರನಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸರ್ಕಾರ ರದ್ದುಪಡಿಸಿದೆ. 

ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕುಟುಂಬದ ಸದಸ್ಯರಿಗೆ ನೀಡಿದ್ದ ಭದ್ರತೆಯನ್ನು ಜಗನ್ ಸರ್ಕಾರ ಹಿಂತೆಗೆದುಕೊಂಡಿದೆ. ನಾಯ್ಡು ಪುತ್ರ ನಾರಾ ಲೋಕೇಶ್ ಅವರಿಗೆ ನೀಡಿದ್ದ Z ಕ್ಯಾಟಗರಿ ಭದ್ರತೆಯನ್ನು ವಾಪಸ್ ಪಡೆದಿದ್ದು, ಅವರಿಗೆ 2+2 ಗನ್ ಮ್ಯಾನ್ ಭದ್ರತೆಯನ್ನು ನೀಡಿದೆ.

Latest Videos

undefined

ರಾಜಕೀಯ ಫುಲ್ ಗರಂ: 8 ಕೋಟಿ ರೂ.ವೆಚ್ಚದ ಕಟ್ಟಡ ಬೀಳಿಸಿದ ಸಿಎಂ!

 ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ತಮಗೆ ನಕ್ಸಲರಿಂದ ಜೀವಬೆದರಿಕೆ ಇದೆ ಎಂಬ ಕಾರಣಕ್ಕೆ ಝಡ್‌ ಪ್ಲಸ್ ಭದ್ರತೆ ಪಡೆದುಕೊಂಡಿದ್ದರು. 

ಈಗ ನಾಯ್ಡು ಮುಖ್ಯಮಂತ್ರಿ ಇಲ್ಲದ ಕಾರಣ ಜೀವಬೆದರಿಕೆ ಇಲ್ಲ. ಆದ್ದರಿಂದ ವಿಶೇಷ ಭದ್ರತೆಯನ್ನು ರದ್ದುಪಡಿಸಲಾಗಿದೆ ಎಂದು ಜಗನ್ ಸರ್ಕಾರ ಸ್ಪಷ್ಟಪಡಿಸಿದೆ. 

ಸೋಮವಾರವಷ್ಟೇ, ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ನಿವಾಸದ ಪಕ್ಕದಲ್ಲಿ ಕಟ್ಟಲಾದ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮ ಮಾಡಲು ಜಗನ್ ಆದೇಶಿಸಿದ್ದರು.

ಹೀಗೆ ಜಗನ್ ಸಿಎಂ ಆದ ಬಳಿಕ  ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದ್ದಾರೆ.

click me!