ಫೆಮಿನಾ ಮಿಸ್‌ ಇಂಡಿಯಾ 2018 ಆಗಿ ಅನುಕೀರ್ತಿ ವಾಸ್‌..!

Published : Jun 20, 2018, 02:06 PM IST
ಫೆಮಿನಾ ಮಿಸ್‌ ಇಂಡಿಯಾ 2018 ಆಗಿ ಅನುಕೀರ್ತಿ ವಾಸ್‌..!

ಸಾರಾಂಶ

ಫೆಮಿನಾ ಮಿಸ್ ಇಂಡಿಯಾ-2018 ಸ್ಪರ್ಧೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅನುಕೀರ್ತಿ ವಾಸ್ ತಮಿಳುನಾಡಿನ 19 ವರ್ಷದ ವಿದ್ಯಾರ್ಥಿನಿ ಕರಣ್ ಜೋಹರ್ ಆಯುಶ್ಮಾನ್ ಖುರಾನಾ ಆಯೋಜನೆ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಪ್ರಶಸ್ತಿ ಪ್ರಧಾನ 

ಮುಂಬೈ(ಜೂ.20): ಫೆಮಿನಾ ಮಿಸ್‌ ಇಂಡಿಯಾ 2018 ಕಿರೀಟವನ್ನು ತಮಿಳುನಾಡಿನ 19 ವರ್ಷದ ಅನುಕೀರ್ತಿ ವಾಸ್‌ ಮುಡಿಗೇರಿಸಿಕೊಂಡಿದ್ದಾರೆ.

ಮುಂಬೈನಲ್ಲಿ ನಿರ್ಮಾಪಕ ಕರಣ್‌ ಜೋಹರ್‌ ಮತ್ತು ನಟ ಆಯುಶ್ಮಾನ್‌ ಖುರಾನಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಅನಿಕೀರ್ತಿ ಪ್ರಶಸ್ತಿ ಮುಡುಗೇರಿಸಿಕೊಂಡರು. ತೀರ್ಪುಗಾರರಲ್ಲಿ ಒಬ್ಬರಾಗಿದ್ದ 2017ರ ಮಿಸ್‌ ವರ್ಲ್ಡ್‌ ವಿನ್ನರ್‌ ಮಾನುಷಿ ಚಿಲ್ಲರ್‌ ಅನುಕೀರ್ತಿಗೆ ಮಿಸ್‌ ಇಂಡಿಯಾ-2018 ಕಿರೀಟ ತೊಡಿಸಿದರು.

ಹರಿಯಾಣದ ಮೀನಾಕ್ಷಿ ಚೌಧರಿ ಮೊದಲ ರನ್ನರ್‌ ಅಪ್‌ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್‌ ಕಮವರಪು ಎರಡನೇ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ತೀರ್ಪುಗಾರರ ಸಮಿತಿಯಲ್ಲಿ ಕ್ರಿಕೆಟರ್‌ ಇರ್ಫಾನ್‌ ಪಠಾಣ್‌ ಮತ್ತು ಕೆಎಲ್‌ ರಾಹುಲ್‌, ಬಾಲಿವುಡ್‌ನ ಮಲೈಕಾ ಅರೋರ, ಬಾಬಿ ಡಿಯೋಲ್‌ ಮತ್ತು ಕುನಾಲ್‌ ಕಪೂರ್ ಇದ್ದರು.

ಅನುಕೀರ್ತಿ ಈ ಮೊದಲು ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ತಮಿಳುನಾಡು ಪಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ಇನ್ನು ಫೆಮಿನಾ ಮಿಸ್‌ ಇಂಡಿಯಾ 2018 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್, ಜಾಕ್ವಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ನಟಿಯರು ಕಾರ್ಯಕ್ರಮ ನಡೆಸಿಕೊಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ
ದುಡಿಯುವ ಮಹಿಳೆಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು