ತಗೋಳಪ್ಪ..ಯಾವಾಗ ಸಾಯ್ತಿವಿ ಅಂತ್ಲೂ ಹೇಳುತ್ತೆ ಗೂಗಲ್..!

First Published Jun 20, 2018, 1:45 PM IST
Highlights

ಯಾವಾಗ ಸಾಯ್ತಿವಿ ಅನ್ನೋದನ್ನೂ ಹೇಳುತ್ತೆ ಗೂಗಲ್

ಗೂಗಲ್ ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನ

ಮಾನವನ ಆರೋಗ್ಯ ಪರಿಸ್ಥಿತಿ ಆಧರಿಸಿ ಮಾಹಿತಿ

ಗೂಗಲ್, ಸ್ಟ್ಯಾನಫೋರ್ಡ್ ಮತ್ತು ಚಿಕಾಗೋ ವಿವಿಯ ಮೆಡಿಸಿನ್ ವಿಭಾಗ

ಸೂಕ್ತ ಚಿಕಿತ್ಸೆಗೆ ನೆರವಾಗಲಿದೆ ಈ ಹೊಸ ತಂತ್ರಜ್ಞಾನ
 

ವಾಷಿಂಗ್ಟನ್(ಜೂ.20): ಗೂಗಲ್ ಬಂತು, ಗೂಗಲ್ ಮ್ಯಾಪ್ ಬಂತು, ಗೂಗಲ್ ಮ್ಯೂಸಿಕ್, ಗೂಗಲ್ ಗೇಮ್ಸ್ ಎಲ್ಲಾ ಬಂತು. ಇದೀಗ ಗೂಗಲ್ ನಾವೆಲ್ಲಾ ಯಾವಾಗ ಸಾಯಲಿದ್ದೀವಿ ಎಂಬುದನ್ನೂ ಹೇಳಲಿದೆ. ಹೌದು, ಗೂಗಲ್ ಅಭಿವೃದ್ಧಿಪಡಿಸಿರುವ ನೂತನ ತಂತ್ರಜ್ಞಾನದ ಸಹಾಯದಿಂದ ನಾವು ಯಾವಾಗ ಸಾಯಲಿದ್ದೀವಿ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಗೂಗಲ್, ಸ್ಟ್ಯಾನಫೋರ್ಡ್ ಮತ್ತು ಚಿಕಾಗೋ ವಿವಿಯ ಮೆಡಿಸಿನ್ ವಿಭಾಗ ಈ ನೂತನ ಯಂತ್ರವನ್ನು ಕಂಡುಹಿಡಿದಿದ್ದು, ಶೇ.95 ರಷ್ಟು ಸತ್ಯ ಮಾಹಿತಿ ನೀಡುತ್ತದೆ ಎಂದು ಹೇಳಲಾಗಿದೆ. ಮಾನವನ ಆರೋಗ್ಯ ಪರಿಸ್ಥಿತಿ ಅರಿತು ಆತ ಯಾವಾಗ ಸಾಯಲಿದ್ದಾನೆ ಎಂದು ಈ ಯಂತ್ರ ಕರಾರುವಕ್ಕಾಗಿ ಹೇಳುತ್ತದೆ. ಇದರಿಂದ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದೂ ಗೂಗಲ್ ತಿಳಿಸಿದೆ.

ಗೂಗಲ್ ಹೆಲ್ತ್‌ಕೇರ್ ಯೂನಿಟ್ ಈ ಯಂತ್ರದ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಮನುಷ್ಯನೋರ್ವನ ಆರೋಗ್ಯದ ಸ್ಥಿತಿ ಮತ್ತು ಆತನ ದೇಹದಲ್ಲಾಗುವ ಬದಲಾವಣೆ ಗಮನಿಸಿ ಆತ ಸಾಯಲಿರುವ ಸಾಧ್ಯತೆಯನ್ನು ಕರಾರುವಕ್ಕಾಗಿ ಹೇಳುತ್ತದೆ. ಅಲ್ಲದೇ ಗೂಗಲ್ ಹೆಲ್ತ್‌ಕೇರ್ ಯೂನಿಟ್ ಈ ಯಂತ್ರ ಶೇ.77 ರಷ್ಟು ನಿಖರತೆ ಹೊಂದಿದೆ ಎಂದು ತಿಳಿಸಿದೆ.

 

click me!