ವಿಶ್ವ ಸಂಸ್ಥೆಗೆ ಈಗ ನೂತನ ಪ್ರಧಾನ ಕಾರ್ಯದರ್ಶಿ

Published : Oct 13, 2016, 09:42 AM ISTUpdated : Apr 11, 2018, 12:58 PM IST
ವಿಶ್ವ ಸಂಸ್ಥೆಗೆ ಈಗ ನೂತನ ಪ್ರಧಾನ ಕಾರ್ಯದರ್ಶಿ

ಸಾರಾಂಶ

193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಗುಟ್ರೆಸ್ 9ನೆಯವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ

ನ್ಯೂಯಾರ್ಕ್(ಅ.13): ವಿಶ್ವ ಸಂಸ್ಥೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆ್ಯಟೋನಿಯೋ ಗುಟ್ರೆಸ್ ಅವರನ್ನು ನೇಮಕ ಮಾಡಲಾಗಿದೆ. ಪೋರ್ಚುಗಲ್​ನ ಮಾಜಿ ಪ್ರಧಾನಿಯಾದ ಇವರು 2017ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ 5 ವರ್ಷದ ಅವಧಿಯವರೆಗೂ ಇವರ ಅಧಿಕಾರವಿರುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯಲ್ಲಿ ಗುಟ್ರೆಸ್ 9ನೆಯವರಾಗಿ ಅಧಿಕಾರ ಸ್ವೀಕರಿಸಲಿದ್ದು, ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ ಮೂನ್ ಅವರ ಅಧಿಕಾರವಧಿ ಈ ವರ್ಷದ ಡಿಸೆಂಬರ್ 31ಕ್ಕೆ ಅಂತ್ಯಗೊಳ್ಳಲಿದೆ.

67 ವರ್ಷದ ಗುಟ್ರೆಸ್ 1995 ರಿಂದ 2002ರ ಅವಧಿಯವರೆಗೆ ಪೋರ್ಚಗಲ್'ನ ಪ್ರಧಾನ ಮಂತ್ರಿ,2005 ರಿಂದ 2015 ವರೆಗೆ ವಿಶ್ವಸಂಸ್ಥೆಯಲ್ಲಿ ನಿರಾಶ್ರಿತರಿಗಾಗಿ ಹೈಮಿಷನರ್ ಆಗಿದ್ದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?