ವಿಶ್ವಕಂಡ ಅಪರೂಪದ ಶೆಫ್, ಕಥೆಗಾರ ಆ್ಯಂಥನಿ ವಿಧಿವಶ..!

Published : Jun 08, 2018, 07:48 PM IST
ವಿಶ್ವಕಂಡ ಅಪರೂಪದ ಶೆಫ್, ಕಥೆಗಾರ ಆ್ಯಂಥನಿ ವಿಧಿವಶ..!

ಸಾರಾಂಶ

ಪ್ರಸಿದ್ದ ಶೆಫ್ ಮತ್ತು ಕಥೆಗಾರ ಆ್ಯಂಥನಿ ಬೌರ್ಡೆನ್ ವಿಧಿವಶ ಫ್ರಾನ್ಸ್ ಹೊಟೇಲ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಆ್ಯಂಥನಿ "Parts Unknown" ಎಂಬ ಟಿವಿ ಕಾಯರ್ಯಕ್ರಮದ ಮೂಲಕ ಜನಪ್ರೀಯತೆ

ನ್ಯೂಯಾರ್ಕ್(ಜೂ.8): ಜಗತ್ತು ಕಂಡ ಅತ್ಯಂತ ಪ್ರಸಿದ್ದ ಶೆಫ್ ಮತ್ತು ಕಥೆಗಾರ ಆ್ಯಂಥನಿ ಬೌರ್ಡೆನ್ ವಿಧಿವಶರಾಗಿದ್ದಾರೆ. 61 ವರ್ಷದ ಆ್ಯಂಥನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್ತಿನ ವಿವಿಧ ಭಾಗಗಗಳಲ್ಲಿನ ಆಹಾರ ಪದ್ದತಿ, ಸಾಂಸ್ಕೃತಿಕ ಭಿನ್ನತೆ ಹೀಗೆ ವಿವಿಧ ಜನಪ್ರೀಯ ಟಿವಿ ಕಾರ್ಯಕ್ರಮಗಳ ಮೂಲಕವೇ ವಿಶ್ವದ ಜನರ ಮನಗೆದ್ದಿದ್ದ ಆ್ಯಂಥನಿ, ಫ್ರಾನ್ಸ್ ನ ಹೊಟೇಲ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ್ಯಂಥನಿ ಅವರ ಗೆಳೆಯ ಎರಿಕ್ ರಿಪರ್ಟ್ ಬೆಳಗ್ಗೆ ಇವರ ಕೋಣೆಗೆ ಹೋದಾಗ ಆ್ಯಂಥನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ.

ಗೆಳೆಯರು ಮತ್ತು ಅಭಿಮಾನಿ ಬಳಗದಲ್ಲಿ ಟೋನಿ ಎಂದೇ ಪ್ರಖ್ಯಾತರಾಗಿದ್ದ ಬೌರ್ಡೆನ್, ತಮ್ಮ ನಿರೂಪಣಾ ಶೈಲಿಯಿಂದಲೇ ಪ್ರಸಿದ್ದಿ ಪಡೆದವರು. ಜಗತ್ತಿನ ವಿಶಿಷ್ಟ ಖಾದ್ಯಗಳ ಕುರಿತು ಮಾಹಿತಿ ಒಸಗಿಸುತ್ತಿದ್ದ ಆ್ಯಂಥನಿ, ಹೇಗೆ ನಿರ್ದಿಷ್ಟ ಆಹಾರ ಪದ್ದತಿಗಳು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಅತ್ಯಂತ ಆಕರ್ಷಕವಾಗಿ ವಿವರಿಸುತ್ತಿದ್ದರು. ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದ ಆ್ಯಂಥನಿ, ತಮ್ಮ "Parts Unknown" ಎಂಬ ಟಿವಿ ಕಾಯರ್ಯಕ್ರಮದ ಮೂಲಕ ಮನೆ ಮನೆ ತಲುಪಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ತಾಯಿ-ಮಗನ ವೈರುಧ್ಯ ನಡೆ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ