ಲಂಕಾಗೆ ಮತ್ತೊಂದು ಉಗ್ರ ದಾಳಿ ಭೀತಿ: ಹೈ ಅಲರ್ಟ್ ಘೋಷಣೆ

Published : Apr 24, 2019, 07:59 AM IST
ಲಂಕಾಗೆ ಮತ್ತೊಂದು ಉಗ್ರ ದಾಳಿ ಭೀತಿ: ಹೈ ಅಲರ್ಟ್ ಘೋಷಣೆ

ಸಾರಾಂಶ

ಲಂಕಾಗೆ ಮತ್ತೊಂದು ಉಗ್ರ ದಾಳಿ ಭೀತಿ| ಸ್ಫೋಟಕ ಹೊತ್ತ ಟ್ರಕ್‌, ವ್ಯಾನ್‌ಗಾಗಿ ಶೋಧ, ಹೈ ಅಲರ್ಟ್‌| ಇನ್ನೊಂದು ದಾಳಿ ಕುರಿತು ಭಾರತದಿಂದಲೂ ಮಾಹಿತಿ

ಕೊಲಂಬೋ[ಏ.24]: ತನ್ನ ಇತಿಹಾಸದಲ್ಲೇ ಕಂಡುಕೇಳರಿಯದ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿರುವ ಶ್ರೀಲಂಕಾ, ಉಗ್ರರು ಮತ್ತೊಮ್ಮೆ ಅಟ್ಟಹಾಸ ನಡೆಸಬಹುದು ಎಂಬ ಆತಂಕದ ಮಡುವಿನಲ್ಲಿದೆ. ಇದಕ್ಕೆ ಇಂಬು ನೀಡುವಂತೆ, ಸ್ಫೋಟಕ ತುಂಬಿದೆ ಎಂದು ಹೇಳಲಾದ ಟ್ರಕ್‌ ಹಾಗೂ ವ್ಯಾನ್‌ವೊಂದು ಕೊಲಂಬೋದತ್ತ ಬರುತ್ತಿದೆ ಎಂಬ ವರ್ತಮಾನ ಲಭಿಸಿದೆ.

ಆ ವಾಹನಗಳಿಗಾಗಿ ಶೋಧ ನಡೆಸುವ ಸಲುವಾಗಿ ಕೊಲಂಬೋದ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮತ್ತೊಂದೆಡೆ, ಲಂಕಾದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಏ.4ರಂದೇ ಭಾರತ ಮಾಹಿತಿ ಕೊಟ್ಟಿತ್ತು. ಎಲ್‌ಟಿಟಿಇ ಉಗ್ರ ಸಂಘಟನೆ ಮತ್ತೊಮ್ಮೆ ತಲೆ ಎತ್ತದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡುತ್ತಿರುವ ಲಂಕಾ ಸರ್ಕಾರ, ಭಾರತದ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಒಂದು ದಾಳಿ ನಡೆಸಿದ ಬಳಿಕ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆ ಮತ್ತಷ್ಟುದಾಳಿ ನಡೆಸಬಹುದು ಎಂದೂ ಭಾರತ ಎಚ್ಚರಿಸಿತ್ತು. ಇದರ ನಡುವೆಯೇ ಸ್ಫೋಟಕ ತುಂಬಿರುವ ಟ್ರಕ್‌, ವ್ಯಾನ್‌ಗಾಗಿ ಲಂಕಾ ಶೋಧ ಆರಂಭಿಸಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!