ಮೇಟಿ ಆಯ್ತು ಈಗ ಮತ್ತೊಬ್ಬ ಶಾಸಕನ ಸರದಿ: ರಾಜಶೇಖರ್ ಬಳಿ ಇದೆ ಈ 'ಕೈ' ಶಾಸಕನ ಸಿಡಿ

Published : Dec 22, 2016, 07:59 AM ISTUpdated : Apr 11, 2018, 12:38 PM IST
ಮೇಟಿ ಆಯ್ತು ಈಗ ಮತ್ತೊಬ್ಬ ಶಾಸಕನ ಸರದಿ: ರಾಜಶೇಖರ್ ಬಳಿ ಇದೆ ಈ 'ಕೈ' ಶಾಸಕನ ಸಿಡಿ

ಸಾರಾಂಶ

ಮಾಜಿ ಸಚಿವ ಎಚ್.ವೈ ಮೇಟಿ ಸಿಡಿ ಪ್ರಕರಣ ರಾಜ್ಯ ರಾಜಕಾರಣಿಗಳ ನಿದ್ದೆ ಕೆಡೆಸಿದೆ. ಮೇಟಿ ಸಿಡಿ ಪ್ರಕರಣ ಬಯಲಿಗೆಳೆದ ಉದ್ಯಮಿ ರಾಜಶೇಖರ ಮಲಾಲಿ ಇನ್ನೂ ಮೂರ್ನಾಲ್ಕು ಜನರ ಸಿಡಿ ಇರುವ ಬಗ್ಗೆ ಮಾತನಾಡಿರುವುದರಿಂದ ರಾಜಕಾರಣಿಗಳ ನಿದ್ದೆ ಕೆಡೆಸಿದೆ.

ಬೆಂಗಳೂರು(ಡಿ.23): ಮಾಜಿ ಸಚಿವ ಎಚ್.ವೈ ಮೇಟಿ ಸಿಡಿ ಪ್ರಕರಣ ರಾಜ್ಯ ರಾಜಕಾರಣಿಗಳ ನಿದ್ದೆ ಕೆಡೆಸಿದೆ. ಮೇಟಿ ಸಿಡಿ ಪ್ರಕರಣ ಬಯಲಿಗೆಳೆದ ಉದ್ಯಮಿ ರಾಜಶೇಖರ ಮಲಾಲಿ ಇನ್ನೂ ಮೂರ್ನಾಲ್ಕು ಜನರ ಸಿಡಿ ಇರುವ ಬಗ್ಗೆ ಮಾತನಾಡಿರುವುದರಿಂದ ರಾಜಕಾರಣಿಗಳ ನಿದ್ದೆ ಕೆಡೆಸಿದೆ.

ತಮ್ಮ ಬಗ್ಗೆ ಸಿಡಿ ಇರುವ ಭಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಜಿ.ಟಿ ಪಾಟೀಲ್ ತಮ್ಮ ವಿರುದ್ದ ವಿಷಯ ಪ್ರಸಾರ ಮಾಡದಂತೆ ಕೋರ್ಟ್'ನಲ್ಲಿ ತಡೆಯಾಜ್ಞೆ ತಂದಿಟ್ಟುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿಯ ಕಾಂಗ್ರೆಸ್ ಶಾಸಕ ಜಿ.ಟಿ. ಪಾಟೀಲ್ ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಪಾಟೀಲರು  ಆ ಶಾಸಕರು ಮೇಟಿಯವರ ಜಿಲ್ಲೆಗೆ ಸೇರಿದವರೇ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

RTI ಕಾರ್ಯಕರ್ತ ರಾಜಶೇಖರ್ ಮಲಾಲಿಯವರು ಹೆಚ್.ವೈ ಮೇಟಿಯ ಸಿಡಿ ಬಿಡುಗಡೆಯ ಬಳಿಕ ತನ್ನ ಬಳಿ ಇನ್ನೂ ಮೂರ್ನಾಲ್ಕು ರಾಜಕಾರಣಿಗಳ ಸಿಡಿ ಇದೆ, ಇನ್ನಷ್ಟು ಸೂಕ್ತ ದಾಖಲೆಗಳೊಂದಗೆ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅವರು ಸಿಡಿಸಿದ ಈ ಬಾಂಬ್ ಸಾಕಷ್ಟು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿತ್ತು.

ಇನ್ನು ಈ ಪ್ರಕರಣದಲ್ಲಿ ತಾನು ಭಾಗಿಯಾಗಿರಲಿಲ್ಲವೆಂದಾದರೆ ಕೋರ್ಟ್'ನಿಂದ ತಡೆಯಾಜ್ಞೆ ತರುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳೂ ಮೂಡುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶದಲ್ಲಿ ಅನಾಮಿಕನ ಕೈಚಳಕ, ಒಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನಿಗೆ ಗುಂಡೇಟು
ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್