
ಟೊಕಿಯೋ(ಜು.5): ಜಪಾನ್ ರಾಜಮನೆತನದ ರಾಜಕುಮಾರಿ 27 ವಷರ್ಷದ ಅಯೋಕೊ ತಮ್ಮ ಪ್ರಿಯಕರನನ್ನು ಮದುವೆಯಾಗಲು ರಾಯಲ್ ಟೈಟಲ್‌ನ್ನು ಬಿಟ್ಟು ಕೊಟ್ಟಿದ್ದಾರೆ. ಅಯೋಕೊ ಪ್ರಿಯಕರ ಜಪಾನ್‌ನ ಹಡುಗು ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿದ್ದು, ಆತನಿಗಾಗಿ ಅಯೋಕೊ ರಾಜಮನೆತನವನ್ನು ಬಿಟ್ಟು ಹೊರಬರಲು ಸಿದ್ದವಾಗಿದ್ದಾರೆ.
ಅಯೋಕೊ ಮತ್ತು ಪ್ರಿಯಕರ ಕೀ-ಮೊರಿಯಾ ಪರಸ್ಪರ ಪ್ರೀತಿಸಿದ್ದು, ಇವರ ಮದುವೆಗೆ ರಾಜಮನೆತನದ ಒಪ್ಪಿಗೆಯೂ ಇದೆ. ಆದರೆ ಕೀ-ಮೊರಿಯೋ ರಾಜಮನೆತನಕ್ಕೆ ಸೇರದ ವ್ಯಕ್ತಿಯಾಗಿದ್ದರಿಂದ ಅಯೋಕೊ ಕೀ ಅವರನ್ನು ಮದುವೆಯಾಗಲು ತಮ್ಮ ರಾಯಲ್ ಶಿರ್ಷಿಕೆಯನ್ನು ತ್ಯಜಿಸಬೇಕಾಗುತ್ತದೆ.
ಜಪಾನ್ ಕಾನೂನಿನ ಪ್ರಕಾರ ರಾಜಮನೆತನಕ್ಕೆ ಸೇರಿದ ವ್ಯಕ್ತಿ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಲು ಬಯಸುವುದಾದರೆ ಆತ ಅಥವಾ ಆಕೆ ತಮ್ಮ ರಾಜವಂಶದ ಶಿರ್ಷಿಕೆಯನ್ನು ತ್ಯಜಿಸಬೇಕಾಗುತ್ತದೆ. ಕಳೆದ ವರ್ಷ ಜಪಾನ್ ರಾಜಮನೆತನದ ರಾಜಕುಮಾರಿ ಮಾಕೋ ಕೂಡ ತಮ್ಮ ರಾಯಲ್ ಟೈಟಲ್ ತ್ಯಜಿಸಿ ಸಾಮಾನ್ಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.