ಗಂಗಾ ಶುದ್ಧಿ: ಇನ್ನೊಬ್ಬ ನಿರಶನ ನಿರತ ಸಾಧು ಅಸ್ವಸ್ಥ

By Web DeskFirst Published Oct 14, 2018, 9:16 AM IST
Highlights

66 ವರ್ಷದ ಸಂತ ಗೋಪಾಲದಾಸ ಅವರೇ ಅಸ್ವಸ್ಥರಾದವರು. ಅವರು 110 ದಿನದಿಂದ ಉಪವಾಸ ಮಾಡುತ್ತಿದ್ದರು. 3 ದಿನಗಳಿಂದ ನೀರು ಸೇವಿಸುವುದನ್ನೂ ಬಿಟ್ಟಿದ್ದರು. 

ಹೃಷಿಕೇಶ(ಅ.14): ಗಂಗೆಯ ಶುದ್ಧಿಗಾಗಿ 109 ದಿವಸ ಉಪವಾಸ ಮಾಡಿ ಹೋರಾಟಗಾರ ಜಿ.ಡಿ. ಅಗರ್‌ವಾಲ್‌ ಅಸುನೀಗಿದ ಬೆನ್ನಲ್ಲೇ, ಇನ್ನೊಬ್ಬ ಉಪವಾಸನಿರತ ಸಾಧು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಹೃಷಿಕೇಶದ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

66 ವರ್ಷದ ಸಂತ ಗೋಪಾಲದಾಸ ಅವರೇ ಅಸ್ವಸ್ಥರಾದವರು. ಅವರು 110 ದಿನದಿಂದ ಉಪವಾಸ ಮಾಡುತ್ತಿದ್ದರು. 3 ದಿನಗಳಿಂದ ನೀರು ಸೇವಿಸುವುದನ್ನೂ ಬಿಟ್ಟಿದ್ದರು. ಶನಿವಾರ ನಸುಕಿನ 3.45ಕ್ಕೆ ಅವರನ್ನು ಏಮ್ಸ್‌ಗೆ ದಾಖಲಿಸಲಾಯಿತು. ಗೋಪಾಲದಾಸರ ಸ್ಥಿತಿ ಹದಗೆಟ್ಟಿದ್ದು, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ದೇಹದ ಸಕ್ಕರೆ ಪ್ರಮಾಣ 65ಕ್ಕೆ ಇಳಿದಿದೆ. ಅವರಿಗೆ ಈಗ ವಿವಿಧ ದ್ರವಗಳನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಗೋಪಾಲದಾಸರನ್ನು ಉಳಿಸಲು ಸಕಲ ಪ್ರಯತ್ನ ಮಾಡಬೇಕೆಂದು ಸರ್ಕಾರವು ಏಮ್ಸ್‌ ಆಸ್ಪತ್ರೆಗೆ ಸೂಚಿಸಿದೆ.

click me!