
ಬೆಂಗಳೂರು(ಜು.30): ಹೆಬ್ಬುಲಿ ಚಿತ್ರ ಸ್ಯಾಂಡಲ್'ವುಡ್'ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಚಿತ್ರ. ಇಲ್ಲಿ ಸುದೀಪ್ ಹೇರ್ ಸ್ಟೈಲಂತೂ ಹುಡುಗರನ್ನ ಮೋಡಿ ಮಾಡಿದೆ. ಆದ್ರೀಗ ಅದೇ ಹೇರ್ ಸ್ಟೈಲ್ ಶಿವಮೊಗ್ಗ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಅದು ಕೂಡ ಸುದೀಪ್ ಓದಿದ ಶಾಲೆಯಲ್ಲೇ ಈಗ ಹೆಬ್ಬುಲಿ ಗಲಾಟೆ ನಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನನಪು... ಮೈ ಆಟೋ ಗ್ರಾಫ್'ನ ಈ ಹಾಡು ಹಿಟ್ ಸಾಂಗ್. ಸುದೀಪ್ ಓದಿದ ಈ ವಾಸವಿ ಸ್ಕೂಲನ್ನು ನೆನಪಿಸಿಕೊಡುತ್ತದೆ ಮೈ ಆಟೋಗ್ರಾಫ್. ಆದರೆ ಇದೇ ವಾಸವಿ ಶಾಲೆಯಲ್ಲೀಗ ಸುದೀಪ್ ಹೇರ್ ಸ್ಟೈಲ್'ನಿಂದಾಗಿ ಅವಾಂತರ ಸೃಷ್ಟಿಯಾಗಿದೆ.
ಸುದೀಪ್ ಹೆಬ್ಬುಲಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದ ವಿದ್ಯಾರ್ಥಿಗೆ ಈ ಶಾಲೆಯ ಶಿಕ್ಷಕ ಹಿಗ್ಗಾಮುಗ್ಗ ಥಳಿಸಿ ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಜುಲ್ ಕರ್ ನೈನ್ ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡು ಹೋಗಿದ್ದಕ್ಕೆ ಶಿಕ್ಷಕ ಮಧುಸೂದನ್ ಕಪಾಳ, ತಲೆ, ಬೆನ್ನು ಎನ್ನದೇ ಬಾರಿಸಿದ್ದಾರಂತೆ.. ಸುದ್ದಿ ತಿಳುದ ಶಾಲೆಗೆ ಬಂದು ಪೋಷಕರು ಪ್ರಶ್ನಿನಿಸಿದ್ರೆ ಶಿಕ್ಷಕ ಮಧುಸೂದನ್ ಸೌಜನ್ಯದಿಂದ ಉತ್ತರಿಸಿಲ್ವಂತೆ.. ಇನ್ನೂ ಶಿಕ್ಷಕನಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗೆ ಖಾಸಗಿ ಕ್ಲಿನಿಕ್ನಲ್ಲಿ ಚಕಿತ್ಸೆ ಕೊಡಿಸಿ ನಂತರ ಮೆಗ್ಗಾನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಲ್ಲಿ ಒಬ್ಬ ಸಿನಿಮಾ ನಟನ ಹೇರ್ಸ್ಟೈಲ್ ಅನುಕರಣೆ ಮಾಡಿದ್ದೇ ಮಹಾಪರಾಧವಾ ಎನ್ನುವ ಪ್ರಶ್ನೆ ಏಳುವುದು ಸತ್ಯ. ಇನ್ನೂ ಕಳೆದ ಕೆಲ ದಿನಗಳ ಹಿಂದೆ ಇದೇ ಹೆಬ್ಬುಲಿ ಹೇರ್ ಸ್ಟೈಲ್ ಗಲಾಟೆ ಜೀವವೊಂದನ್ನು ಬಲಿ ಪಡೆದಿದೆ. ಮಗ ಹೆಬ್ಬುಲಿ ಹೇರ್ಸ್ಟೈಲ್ ಮಾಡಿಸಿಕೊಂಡಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದು ನಂತರ ತಾಯಿ ನೇಣಿಗೆ ಶರಣಾಗಿದ್ದಳು. ಇದು ಮಾಸುವ ಮುನ್ನವೇ ಸುದೀಪ್ ಓದಿದ ಶಾಲೆಯಲ್ಲೇ ಮತ್ತೊಂದು ಹೆಬ್ಬುಲಿ ಗಲಾಟೆಯಾಗಿದ್ದು ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.