ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ

By Suvarna Web DeskFirst Published Nov 2, 2016, 2:29 PM IST
Highlights

ಚಿಕ್ಕಮಗಳೂರುಜಿಲ್ಲೆಯಮೂಡಿಗೆರೆತಾಲ್ಲೂಕಿನಕೂವೆಗ್ರಾಮದಕಲ್ಮನೆಯಲ್ಲಿಲೋಕೇಶ್ಎನ್ನುವರಿಗೆಸೇರಿದಸರ್ವೇನಂಬರ್49ರಲ್ಲಿಇದ್ದ3 ಕರೆಜಾಗವನ್ನು ಒತ್ತುವರಿ ಮಾಡಿ ಕಾಫೀ ತೋಟವನ್ನಾಗಿ ಪರಿರ್ವನೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು(ನ.2): ಕೌಂಟುಬಿಕ ಕಲಹದ ಮೂಲಕ ಭಾರೀ ಸುದ್ದಿ ಮಾಡಿದ್ದ ಮಾಜಿ ಶಾಸಕ ಕುಮಾರಸ್ವಾಮಿ ಈಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿಕೊಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೂವೆ ಗ್ರಾಮದ ಕಲ್ಮನೆಯಲ್ಲಿ  ಲೋಕೇಶ್ ಎನ್ನುವರಿಗೆ ಸೇರಿದ ಸರ್ವೇ ನಂಬರ್ 49ರಲ್ಲಿ ಇದ್ದ 3 ಎಕರೆ ಜಾಗವನ್ನು ಮಾಜಿ ಶಾಸಕ ಕುಮಾರಸ್ವಾಮಿ ಒತ್ತುವರಿ ಮಾಡಿ ಕಾಫೀ ತೋಟವನ್ನಾಗಿ ಪರಿರ್ವನೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಲೋಕೇಶ್ ರವರ ತೋಟದ ಪಕ್ಕದಲ್ಲೇ ಮಾಜಿ ಶಾಸಕ ಕುಮಾರಸ್ವಾಮಿ 7 ಎಕರೆ  ತೋಟವಿದ್ದು, ಅದರ ಪಕ್ಕದಲ್ಲೇ ಇದ್ದ ಲೋಕೇಶ್ ಎನ್ನುವರಿಗೆ ಸೇರಿದ 3 ಎಕರೆ ಜಾಗವನ್ನು ಶಾಸಕರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಒತ್ತುವರಿ ಮಾಡಿ ಸಾಗುವಳಿ ಮಾಡಿದ್ದಾರೆ ಎನ್ನುವ ಕೂಗು ಮೂಲ ಖಾತೆದಾರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಕುಮಾರಸ್ವಾಮಿ ಯಾವುದೇ ಭೂಮಿಯನ್ನು  ಒತ್ತುವರಿ ಮಾಡಿಲ್ಲ, ಜಿಲ್ಲಾಡಳಿಯಿಂದಲೇ ಸರ್ವೇ ಕಾರ್ಯ ನಡೆಸಲಿ, ಒಂದು ವೇಳೆ ಒತ್ತುವರಿಯಾಗಿದ್ದರೆ ಭೂಮಿಯನ್ನು ನೀಡಲು ಸಿದ್ದ ರಾಜಕೀಯ ದುರುಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

click me!