OROP ಆತ್ಮಹತ್ಯೆ: ಮೃತ ಯೋಧನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ

By Suvarna Web DeskFirst Published Nov 2, 2016, 1:18 PM IST
Highlights

ರಾಮ್ ಕಿಶನ್ ಗ್ರೆವಾಲ್ ಎಂಬ ನಿವೃತ್ತ ಯೋಧ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬದಿಂದ ನೊಂದಿದ್ದರು ಎನ್ನಲಾಗಿದೆ.

ನವದೆಹಲಿ (ನ.02): ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ವಿಳಂಬದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧನ ಮಾನಸಿಕ ಆರೋಗ್ಯದ ಬಗ್ಗೆ ಹೇಳಿಕೆ ನೀಡಿ ಕೇಂದ್ರ ಮಂತ್ರಿ ವಿವಾದವನ್ನು ಸೃಷ್ಟಿಸಿದ್ದಾರೆ.

ಆ ಮಾಜಿ ಯೋಧ ಆತ್ಮಹತ್ಯೆ ಮಾಡಿಕೊಂಡ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆತನ ಮಾನಸಿಕ ಆರೋಗ್ಯ ಹೇಗಿತ್ತು ಎಂದು ಯಾರಿಗೂ ಗೊತ್ತಿಲ್ಲ. ಆ ಬಗ್ಗೆ ತನಿಖೆಯಾಗಬೇಕು. ಸಮಾನ ಹುದ್ದೆ-ಸಮಾನ ಪಿಂಚಣಿ ಯೋಜನೆಯನ್ನು ರಾಜಕೀಯಕರಣಗೊಳಿಸಬಾರದು, ಎಂದು ಕೇಂದ್ರ ಸಚಿವರೂ, ಭೂಸೇನೆಯ ನಿವೃತ್ತ ಮುಖ್ಯಸ್ಥರೂ ಆಗಿರುವ ವಿ,ಕೆ.ಸಿಂಗ್ ಹೇಳಿದ್ದಾರೆ.

ರಾಮ್ ಕಿಶನ್ ಗ್ರೆವಾಲ್ ಎಂಬ ನಿವೃತ್ತ ಯೋಧ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಮಾನ ಹುದ್ದೆ-ಸಮಾನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬದಿಂದ ನೊಂದಿದ್ದರು ಎನ್ನಲಾಗಿದೆ.

ಗ್ರೆವಾಲ್ ಕುಟುಂಬಸ್ಥರು, ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ ಹಾಗೂ ಆತ್ಮಹತ್ಯೆ  ಮಾಡಿಕೊಳ್ಳುವ ಮುಂಚೆ ಗ್ರೆವಾಲ್ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್’ಗೆ ಪತ್ರ ಬರೆದಿದ್ದರು ಎನ್ನಲಾಗಿದೆ.

click me!