ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!

Published : Aug 22, 2019, 09:50 AM IST
ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!

ಸಾರಾಂಶ

ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!| ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಘಟನೆ

ಇಂದೋರ್‌[ಆ.22]: ಒಂದು ವರ್ಷದ ಮಗಳ ಅಳುವಿನಿಂದಾಗಿ ನಿದ್ದೆ ಭಂಗ ಉಂಟಾಗುತ್ತಿದೆ ಎಂದು ಪತಿ ಮಹಾಶಯನೊಬ್ಬ ತ್ರಿವಳಿ ತಲಾಖ್‌ ಕೊಟ್ಟಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

25 ವರ್ಷದ ಅಕ್ಬರ್‌ ಎಂಬಾತ ತನ್ನ ಪತ್ನಿ ಉಝ್ಮಾ ಅನ್ಸಾರಿ (21)ಗೆ ತ್ರಿವಳಿ ತಲಾಖ್‌ ನೀಡಿದ್ದು, ಸೇಂಧ್ವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಟುಂಬಸ್ಥರ ಎದುರಲ್ಲೇ ನನಗೆ ಪತಿ ತ್ರಿವಳಿ ತಲಾಖ್‌ ನೀಡಿ, ನನ್ನ ತಾಯಿಗೆ ಕರೆ ಮಾಡಿ ಕರೆದುಕೊಂಡು ಹೋಗಿ ಎಂದು ಹೇಳಿ ನನ್ನನ್ನು ಮತ್ತು ಮಗುವನ್ನು ಮನೆಯಿಂದ ಹೊರಗೆ ಹಾಕಿದ್ದಾನೆ.

ಮಾವ ಮತ್ತು ಮೈದುನ ನನ್ನ ಮೇಲೆ ಹಲ್ಲೆ ಮಾಡಿದ್ದು, ಮಗುವಿಗೂ ಹೊಡೆದು ಹಾಸಿಗೆ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾಳೆ. ಅಲ್ಲದೇ ವರದಕ್ಷಿಣೆ ಕಿರುಕುಳ ಕೂಡ ನೀಡುತ್ತಿದ್ದರು ಎಂದು ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಪೊಲೀಸ್‌ ವಿಚಾರಣೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: Asian Games 2026 - 17 ಪದಕ ಗೆದ್ದರೂ 15ನೇ ಸ್ಥಾನಕ್ಕೆ ಕುಸಿದ ಭಾರತ..! ಶೂಟಿಂಗ್‌ನಲ್ಲಿ 5ನೇ ದಿನವೂ ಸಿಗಲಿಲ್ಲ ಬಂಗಾರ!
Karnataka News Live: ಕರ್ನಾಟಕ ಬರ ಪರಿಹಾರ: ರೈತರಿಗೆ ₹2,500 ಸಬ್ಸಿಡಿ ಮತ್ತು ಸಾಲ ಮರುಪಾವತಿಗೆ 1 ವರ್ಷ ತಡೆ