ತಲಕಾವೇರಿ ಅರ್ಚಕರ ಪುತ್ರಿಯರು ಮತಾಂತಗೊಂಡಿದ್ದು, ಪರಿಹಹಾರ ರೂಪದಲ್ಲಿ ನೀಡಿದ್ದ ಚೆಕ್ ಮರಳಿಸಿದ್ದಾರೆ. ಇನ್ನು ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯೂ ವೃದ್ಧಿಸಿದ್ದು, ಜನರನ್ನು ಮತ್ತಷ್ಟು ಕಂಗೆಡಿಸಿದೆ. ಅತ್ತ ಕಾಂಗ್ರೆಸ್‌ನಲ್ಲಿ 23 ನಾಯಕರು ಬರೆದ ಪತ್ರದಿಂದ ಮೂಡಿದ ಅಸಮಾಧಾನ ಎಲ್ಲೆಡೆ ಸದ್ದು ಮಾಡುತ್ತಿದ್ದು ಸೋನಿಯಾ ಹಾಗೂ ರಾಹುಲ್ ಗಾಂಧಿ ಇದರಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಅಜಾದ್‌ಗೆ ಕರೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇಂದಿನ ಟಾಪ್ ಆಗಸ್ಟ್ 26 ರ ಟಾಪ್ 10 ಸುದ್ದಿಗಳು ಇಲ್ಲಿವೆ
ತಲಕಾವೇರಿ ಅರ್ಚಕರ ಪುತ್ರಿಯರು ಮತಾಂತರ, ಬದಲಾದ ಹೆಸರು: ಚೆಕ್ ವಾಪಸ್
ಹೆಸರು ಬದಲಾವಣೆ ಗೊಂದಲದ ಹಿನ್ನೆಲೆಯಲ್ಲಿ, ತಲಕಾವೇರಿಯ ಗಜಗಿರಿ ಭೂಕುಸಿತದಲ್ಲಿ ಮೃತಪಟ್ಟತಲಕಾವೇರಿಯ ಅರ್ಚಕ ನಾರಾಯಣಾಚಾರ್ ಅವರ ಪುತ್ರಿಯರಿಗೆ ನೀಡಲಾದ ಪರಿಹಾರ ಚೆಕನ್ನು ಅವರು ಹಿಂತಿರುಗಿಸಿದ್ದಾರೆ.
ಶಾಲಾ-ಕಾಲೇಜು ಆರಂಭದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ
ನಾವು ಅಕ್ಟೋಬರ್ ತಿಂಗಳಿಂದ ಶಾಲಾ-ಕಾಲೇಜುಗಳನ್ನು ತೆರೆಯಹುದು ಅಂದುಕೊಂಡಿದ್ದೇವೆ. ಆದ್ರೆ, ಕೇಂದ್ರದ ಮಾರ್ಗಸೂಚಿ ನಿರೀಕ್ಷೆಯಲ್ಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಅಣ್ಣಾಮಲೈ ಬಿಜೆಪಿಗೆ; ಆಯ್ಕೆ ಹಿಂದಿದೆ ಈ ಕಾರಣಗಳು..!
ಕಳೆದ ವರ್ಷ ಐಪಿಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಒಂದು ವರ್ಷ ಕಾಲ ತಮಿಳುನಾಡಿನಲ್ಲಿ ಯುವಕರಿಗೆ ನಾಯಕತ್ವ ತರಬೇತಿ ನೀಡುತ್ತಿದ್ದ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಇದೀಗ ತಮ್ಮ ತಾಯ್ನೆಲದ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಕುಟುಂಬ ರಾಜಕಾರಣದಲ್ಲೇ ಮುಳುಗೇಳುತ್ತಿರುವ ತಮಿಳುನಾಡು ರಾಜಕೀಯಕ್ಕೆ ಹೊಸ ರೂಪ ಕೊಡುವ ಉಮೇದಿನಲ್ಲಿದ್ದಾರೆ. ಭವಿಷ್ಯದ ರಾಜಕೀಯ ಹಾದಿ, ತಮಿಳುನಾಡು ರಾಜಕೀಯ ಸೇರಿ ವಿವಿಧ ವಿಚಾರಗಳನ್ನು ಈ ಸಂದರ್ಭದಲ್ಲಿ ಅವರು ‘ಕನ್ನಡಪ್ರಭ’ ದೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.
ಕೊರೋನಾ ಪಾಸಿಟಿವ್: ಆತ್ಮಹತ್ಯೆ ಮಾಡಿಕೊಂಡ ಕಾಂಗ್ರೆಸ್ ಹಿರಿಯ ನಾಯಕ
ಕೊರೋನಾ ಪಾಸಿಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದಿದೆ. ಕಡಪಾ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿರಿಗಿರಿರೆಡ್ಡಿ ಗಂಗಿ ರೆಡ್ಡಿ (55) ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ಕಾರಣಕ್ಕೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಲೆಟರ್ ವಿವಾದ, ಡ್ಯಾಮೇಜ್ ಕಂಟ್ರೋಲ್ ಮಾಡಲು ಗುಲಾಂ ನಬಿಗೆ ಸೋನಿಯಾ ಕರೆ!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಇಬ್ಬರೂ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ಗಗೆ ಕರೆ ಮಾಡಿ ಮಾತನಾಡಿದ್ದಾರೆ. ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿಯ ಮ್ಯಾರಥಾನ್ ಸಭೆಯಲ್ಲಿ ಪತ್ರ ಬರೆದ ಸಂಬಂಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ನಾಯಕರ ವಿರುದ್ಧ ಕಿಡಿ ಕಾರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸೂರ್ಯ ಮಂದಿರದ ವಿಡಿಯೋ ಶೇರ್ ಮಾಡಿದ ಮೋದಿ: ಮಳೆಗಾಲದ ಸೌಂದರ್ಯಕ್ಕೆ ಎಲ್ಲರೂ ಫಿದಾ!
ಗುಜರಾತ್‌ನ ಹಲವೆಡೆ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ನದಿಗಳು ತುಂಬಿ ಹರಿಯುತ್ತಿದ್ದು, ನೂರಕ್ಕೂ ಅಧಿಕ ಕಡೆ ಹೈಅಲರ್ಟ್ ಘೋಷಿಸಲಾಗಿದೆ. ಇವೆಲ್ಲದರ ನಡುವೆ ಪಿಎಂ ಮೋದಿ ಟ್ವಿಟರ್‌ನಲ್ಲಿ ಅದ್ಭುತವಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊಡೇರಾದ ಸೂರ್ಯ ಮಂದಿಇರದ ಅದ್ಭುತ ದೃಶ್ಯವೊಂದಿದದೆ. ಈ ಮನಮೋಹಕ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.
ಕೋಟಿ, ಕೋಟಿಗೆ ಮೆಡಿಕಲ್ ಸೀಟ್ ಮಾರಾಟ; ಹೊರರಾಜ್ಯದ ವಿದ್ಯಾರ್ಥಿಗಳಿಗೆ ಬಹುಪಾಲು
ಮೆಡಿಕಲ್ ಸೀಟ್ ದಂಧೆ ಬ್ಲಾಕಿಂಗ್ ದಂಧೆ ಶುರುವಾಗಿದೆ. ಹೊರ ರಾಜ್ಯದ ಶ್ರೀಮಂತರ ಮಕ್ಕಳ ಪಾಲಾಗಿದೆ ಮೆಡಿಕಲ್ ಸೀಟ್. ಕೋಟಿ ಕೋಟಿಗೆ ಮೆಡಿಕಲ್ ಸೀಟ್ ಮಾರಾಟವಾಗಿದೆ. ಕಾಲೇಜುಗಳಲ್ಲಿ ಲಭ್ಯವಿರುವ ಉಳಿಕೆ ಸೀಟ್‌ಗಳ ಡಿಸ್‌ಪ್ಲೇ ತೋರಿಸದೇ ಬ್ಲಾಕಿಂಗ್ ಮಾಡಲಾಗಿದೆ.
ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ
ತಮಿಳು ಸಿನಿಮಾದ ನಟಿ ಜ್ಯೋತಿಕಾ ಮತ್ತು ಸಿಂಗಂ ಸೂರ್ಯ ಜೋಡಿ ಫೇಮಸ್ ಕಪಲ್. ಇಬ್ಬರದು ಲವ್ ಕಂ ಎರೇಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ್ರೂ ಪತಿ ಸೂರ್ಯಗೆ ಜ್ಯೋತಿಕಾ ಒಂದು ಕಪ್ ಕಾಫಿ ಮಾಡ್ಕೊಟ್ಟಿಲ್ಲಾಂದ್ರೆ ನಂಬ್ತೀರಾ..?
ಯಾದಗಿರಿ: ಬಡ ಕುಟುಂಬಕ್ಕೆ ನೆರವು, ಮಾನವೀಯತೆ ಮೆರೆದ ಬಾಲಿವುಡ್ ನಟ ಸೋನು ಸೂದ್
ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ ಯಾದಗಿರಿಯ ಕುಟುಂಬವೊಂದಕ್ಕೆ ಖ್ಯಾತ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿದ್ದಾರೆ. ವಲಸೆ ಕಾರ್ಮಿಕರು ಹಾಗೂ ಬಡ ರೈತರ ಪರ ಸಹಾಯದ ಮೂಲಕ ಜನಮನ ಸೆಳೆದಿರುವ ಸೋನು ಸೂದ್‌ರ ಈ ಕಾರ್ಯ ಮತ್ತೊಮ್ಮೆ ಶ್ಲಾಘನೆಗೆ ಪಾತ್ರವಾಗಿದೆ.
ಮುಕೇಶ್ ಅಂಬಾನಿ ನಾದಿನಿ ಮಮತಾ ದಲಾಲ್, ಶಾರುಖ್ ಮಗಳಿಗೆ ಇವರೇ ಟೀಚರ್!
ದೇಶದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತನ್ನ ಕೆಲಸ ಹಾಗೂ ಸಾಮಾಜಿಕ ಜೀವನಶೈಲಿಗೆ ಸಂಬಬಂಧಿಸಿದಂತೆ ಸಾಮಾಣ್ಯವಾಗಿ ಚರ್ಚೆಯಲ್ಲಿರುತ್ತಾರೆ. ಅಂಬಾನಿ ಕುಟುಂಬದ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ನೀತಾ ಅಂಬಾನಿಯ ತವರು ಮನೆ ಹೇಗಿದೆ? ಅವರ ಕುಟುಂಬದಲ್ಲಿ ಯಾರು ಯಾರು ಇದ್ದಾರೆ? ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ನೀತಾ ಅಂಬಾನಿಗೊಬ್ಬ ಕಿರಿಯ ಸಹೋದರಿ ಇದ್ದಾರೆ ಹಾಗೂ ಅವರು ಎಲ್ಲರಿಗಿಂತ ರೂಪವತಿಯಾಗಿದ್ದಾರೆ. ಅತ್ಯಂತ ಲೋ ಪ್ರೊಫೈಲ್‌ನಲ್ಲಿ ಜೀವಿಸುವ ಮಮತಾ ದಲಾಲ್ ವೃತ್ತಿಯಲ್ಲಿ ಓರ್ವ ಶಿಕ್ಷಕಿ. ಇವರು ಅನೇಕ ಮಂದಿ ಸೆಲೆಬ್ರಿಟಿಗಳ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ ಮಮತಾ ದಲಲಾಲ್ ಕುರಿತಾದ ಮಾಹಿತಿ.