ಸಿಎಂ ಭೇಟಿಯಾದರೆಂದು ಜಿಟಿಡಿ ಪಕ್ಷ ಬಿಡ್ತಾರೆ ಅಂತ ಹೇಳಬೇಡಿ| ಅನರ್ಹರದ್ದೇ ತ್ರಿಶಂಕು ಸ್ಥಿತಿ, ಇನ್ನಾರು ಪಕ್ಷ ಬಿಡ್ತಾರೆ?: ಅನಿತಾ
ರಾಮನಗರ[ಸೆ.16]: ಅನರ್ಹ ಶಾಸಕರು ತ್ರಿಶಂಕು ಸ್ಥಿತಿಯಲ್ಲಿರುವುದನ್ನು ಎಲ್ಲರೂ ನೋಡುತ್ತಿದ್ದಾರೆ. ಹೀಗಿರುವಾಗ ಯಾವ ಶಾಸಕರು ತಾನೇ ಪಕ್ಷ ತೊರೆದು ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಲು ಬಯಸುತ್ತಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅತೃಪ್ತ ಶಾಸಕರ ಸ್ಥಿತಿ ನೋಡಿದ ಬಳಿಕ ಈಗಿರುವ ಶಾಸಕರು ಭವಿಷ್ಯ ಹಾಳು ಮಾಡಿಕೊಳ್ಳಲು ಸಿದ್ಧರಿಲ್ಲ. ಅಲ್ಲದೆ, ಬೇರೆ ಯಾರೂ ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದರು.
ಮತ್ತೆ ಬಿಎಸ್‌ವೈ ಮನೆಗೆ ಹೆಜ್ಜೆ ಹಾಕಿದ ಜೆಡಿಎಸ್ ಶಾಸಕ ಜಿಟಿಡಿ!
ಮಾಜಿ ಸಚಿವ ಜಿ.ಟಿ. ದೇವೇಗೌಡರವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಅದರಲ್ಲಿ ತಪ್ಪೇನಿದೆ? ನಾನೂ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಭೇಟಿ ಮಾಡುತ್ತೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾದಾಕ್ಷಣ ಪಕ್ಷ ಬಿಡುತ್ತಾರೆ ಎಂದು ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.