
ವಿಧಾನಸಭೆ : ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ಸಿನ ಆನಂದ ನ್ಯಾಮಗೌಡ ಅವರಿಗೆ ಬೆಳಗಾವಿ ಅಧಿವೇಶನ ಮೊದಲ ಅಧಿವೇಶನವಾಗಿದ್ದು, ಉತ್ಸುಕತೆಯಿಂದ ಭಾಗವಹಿಸಿದ್ದರು.
ಆನಂದ್ ನ್ಯಾಮಗೌಡ ಸದನದಲ್ಲಿ ಮೊದಲೇ ಹಾಜರಿದ್ದರೆ, ಅನಿತಾ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ ಬಳಿಕ ಸದನಕ್ಕೆ ಬಂದರು.
ಅನಿತಾ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಜೆಡಿಎಸ್ ಶಾಸಕರು ಅವರ ಬಳಿ ಬಂದು ನಮಸ್ಕರಿಸಿದರು. ಆದರೆ, ಕಾಂಗ್ರೆಸ್‌ನ ಯಾವ ಮಹಿಳಾ ಸದಸ್ಯರೂ ಬಂದು ಮಾತನಾಡಿಸಲಿಲ್ಲ.
ಸದನದಲ್ಲಿ ಒಂಟಿಯಾಗಿ ಕುಳಿತಿದ್ದ ಅನಿತಾ ಕುಮಾರಸ್ವಾಮಿಗೆ ಸದನ ಮುಗಿಯುವ ಹಂತದಲ್ಲಿ ಬಂದ ವಿನೀಶಾ ನಿರೋ ಸಾಥ್ ನೀಡಿದರು. ಅನಿತಾ ಕುಮಾರಸ್ವಾಮಿ ಅವರನ್ನು ಪರಿಚಯ ಮಾಡಿಕೊಂಡ ಕೆಲಹೊತ್ತಿನಲ್ಲಿಯೇ ಸದನವನ್ನು ಮುಂದೂಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.