ಮುಯ್ಯಿಗೆ ಮುಯ್ಯಿ: ಕೇಂದ್ರದಲ್ಲಿ ಮೋದಿ ಮಾಡಿದ್ದನ್ನೇ ಬಿಹಾರದಲ್ಲಿ ಮಾಡಿದ ನಿತೀಶ್!

By Web DeskFirst Published Jun 2, 2019, 4:05 PM IST
Highlights

ಜೆಡಿಯು-ಬಿಜೆಪಿ ನಡುವೆ ಹೆಚ್ಚಿದ ಕಂದರ| ಕೇಂದ್ರ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಯುಗಿಲ್ಲ ಸೂಕ್ತ ಸ್ಥಾನ| ಬಿಹಾರ ಸಚಿವ ಸಂಪುಟ ವಿಸ್ತರಣೆ ನೆಪದಲ್ಲಿ ಸೇಡು ತೀರಿಸಿಕೊಂಡ ನಿತೀಶ್ ಕುಮಾರ್| ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದ ಬಿಹಾರ ಸಿಎಂ| ಜೆಡಿಯುನ 8 ಶಾಸಕರಿಗೆ ಸಚಿವ ಸ್ಥಾನ, ಬಿಜೆಪಿ ಕೇವಲ ಒಂದು ಸ್ಥಾನ| ಕೇಂದ್ರದಲ್ಲಿ ಮೋದಿ ಮಾಡಿದ್ದನ್ನೇ ಬಿಹಾರದಲ್ಲಿ ಮಾಡಿದ ನಿತೀಶ್ ಕುಮಾರ್| ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರಲ್ಲ ಎಂದ ಜೆಡಿಯು|

ಪಾಟ್ನಾ(ಜೂ.02): ಕೇಂದ್ರ ಸಚಿವ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಯುಗೆ ಸೂಕ್ತ ಸ್ಥಾನಮಾನ ನೀಡದ ಬಿಜೆಪಿ ವಿರುದ್ಧ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇಡು ತೀರಿಸಿಕೊಂಡಿದ್ದಾರೆ.

ಈಗಾಗಲೇ ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಡಿಯು, ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತನ್ನ 8 ಶಾಸಕರಿಗೆ ಸಚಿವ ಸ್ಥಾನ ನೀಡಿ ಬಿಜೆಪಿಗೆ ಕೇವಲ 1 ಸ್ಥಾನ ನೀಡಿದೆ.

Bihar cabinet expansion: Eight JDU leaders take oath as ministers in State Government pic.twitter.com/LHqNVFVteA

— ANI (@ANI)

ಮೋದಿ 2.0 ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದು ಸ್ಥಾನ ನೀಡಲಾಗಿದ್ದು, ಇದಕ್ಕೆ ಮುಯ್ಯಿ ತೀರಿಸಿಕೊಂಡಿರುವ ನಿತೀಶ್ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನ ಬಿಟ್ಟು ಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಬಿಜೆಪಿ ಸದ್ಯ ಒಂದು ಸ್ಥಾನವನ್ನು ಭರ್ತಿ ಮಾಡುವ ಇರಾದೆ ಹೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತಲಾ 17 ಕ್ಷೇತ್ರಗಳನ್ನು ಹಂಚಿಕೊಂಡಿದ್ದ ಬಿಜೆಪಿ-ಜೆಡಿಯು, 20-20 ಸೀಟು ಹಂಚಿಕೆ ಮಾದರಿಯಲ್ಲಿ ಚುನಾವಣೆ ಎದುರಿಸಿತ್ತು. ಸ್ಪರ್ಧಿಸಿದ್ದ 17 ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಜೆಡಿಯು ಜಯಗಳಿಸಿದ್ದರೆ, ಎಲ್ಲಾ 17 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು.

Bihar CM Nitish Kumar on cabinet expansion: Vacancies from JDU quota in the cabinet were empty so JDU leaders were inducted, there is no issue with BJP, everything is fine pic.twitter.com/376FlJVdFF

— ANI (@ANI)

ಆದರೆ ಕೇಂದ್ರ ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದು ಸ್ಥಾನ ನೀಡುವ ಮೂಲಕ ಪ್ರಧಾನಿ ಮೋದಿ ಬಿಹಾರ ಸಿಎಂ ನಿತೀಶ್ ಕುಮಾರ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಪಕ್ಷ ಗೆದ್ದ ಸಂಸದರ ಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ದಿಷ್ಟ ಭಾಗವನ್ನು ನೀಡಬೇಕೆಂದು ನಿತೀಶ್ ಕುಮಾರ್ ಒತ್ತಾಯಿಸಿದ್ದರು.

click me!