ಅಮ್ಮಾ ಕ್ಯಾಂಟೀನ್‌ ರೀತಿ ಅನ್ನ ಕ್ಯಾಂಟೀನ್‌

Published : Jul 12, 2018, 10:28 AM IST
ಅಮ್ಮಾ ಕ್ಯಾಂಟೀನ್‌ ರೀತಿ ಅನ್ನ ಕ್ಯಾಂಟೀನ್‌

ಸಾರಾಂಶ

ತಮಿಳುನಾಡಿನ ಅಮ್ಮಾ, ಕರ್ನಾಟಕದ ಇಂದಿರಾ ಕ್ಯಾಂಟೀನ್‌ ರೀತಿಯಲ್ಲೇ ಆಂಧ್ರಪ್ರದೇಶದಲ್ಲಿ ಅನ್ನ ಕ್ಯಾಂಟೀನ್‌ ಆರಂಭಿಸಲಾಗಿದೆ. 

ಅಮರಾವತಿ: ತಮಿಳುನಾಡಿನ ಅಮ್ಮಾ, ಕರ್ನಾಟಕದ ಇಂದಿರಾ ಕ್ಯಾಂಟೀನ್‌ ರೀತಿಯಲ್ಲೇ ಆಂಧ್ರಪ್ರದೇಶದಲ್ಲಿ ಅನ್ನ ಕ್ಯಾಂಟೀನ್‌ ಆರಂಭಿಸಲಾಗಿದೆ. 

ಈ ಕ್ಯಾಂಟೀನ್‌ಗೆ ಸಿಎಂ ಚಂದ್ರಬಾಬು ನಾಯ್ಡು ಬುಧವಾರ ಚಾಲನೆ ನೀಡಿದರು. ಮೊದಲ ಹಂತದಲ್ಲಿ ರಾಜ್ಯದೆಲ್ಲೆಡೆ 60 ಅನ್ನ ಕ್ಯಾಂಟೀನ್‌ ಆರಂಭಗೊಂಡಿವೆ. ಬೆಂಗಳೂರಿನ ಅಕ್ಷರ ಪಾತ್ರಾ ಫೌಂಡೇಶನ್‌ ಅನ್ನ ಕ್ಯಾಂಟೀನ್‌ ನಿರ್ವಹಿಸಲಿದೆ. 

ಕ್ಯಾಂಟೀನ್‌ನಲ್ಲಿ 5 ರು.ಗೆ ಉಪಾಹಾರ, ಊಟ, ರಾತ್ರಿಯ ಊಟವನ್ನು ನೀಡಲಾಗುತ್ತದೆ. ಉದ್ಘಾಟನೆಯ ಬಳಿಕ ಮಾತನಾಡಿದ ಚಂದ್ರಬಾಬು ನಾಯ್ಡು, ಕೆ.ಎಫ್‌.ಸಿ. ಅಥವಾ ಮ್ಯಾಕ್‌ಡೊನಾಲ್ಡ್‌ ರೀತಿಯಲ್ಲಿ ಕ್ಯಾಂಟೀನ್‌ ಅಂತಾರಾಷ್ಟ್ರೀಯ ಗುಣಮಟ್ಟಹೊಂದಿರಲಿವೆ. ಸಿಸಿಟೀವಿ ಕ್ಯಾಮರಾ ಸೇರಿದಂತೆ ಹೈಟೆಕ್‌ ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌
ನಬಾರ್ಡ್‌ ಅನುದಾನ ಕಡಿತದಿಂದ ಕೃಷಿ ಸಾಲ ನೀಡಲು ಸಮಸ್ಯೆ: ಸಿಎಂ ಸಿದ್ದರಾಮಯ್ಯ