ಆಂಧ್ರದಲ್ಲಿ ಏಕತಾ ಪ್ರತಿಮೆಗಿಂತ ಎತ್ತರದ ವಿಧಾನಸಭೆ!

Published : Nov 23, 2018, 04:21 PM ISTUpdated : Nov 23, 2018, 04:28 PM IST
ಆಂಧ್ರದಲ್ಲಿ ಏಕತಾ ಪ್ರತಿಮೆಗಿಂತ ಎತ್ತರದ ವಿಧಾನಸಭೆ!

ಸಾರಾಂಶ

ದೇಶದಲ್ಲಿ ಶುರುವಾಗಿದೆ ಎತ್ತರದ ಪ್ರತಿಮೆ, ಸ್ಮಾರಕ, ಕಟ್ಟಡ ನಿರ್ಮಾಣ ಸ್ಪರ್ಧೆ! ಗುಜರಾತ್ ನಲ್ಲಿ ಸರ್ದಾರ್ ಪಟೇಲರ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ! ಎತ್ತರದಲ್ಲಿ ಏಕತಾ ಪ್ರತಿಮೆ ಮೀರಿಸಲಿದೆ ಆಂಧ್ರ ವಿಧಾನಸಭೆ ಹೊಸ ಕಟ್ಟಡ! 250 ಮೀಟರ್‌ ಎತ್ತರದ ವಿಧಾಸಭೆ ಕಟ್ಟಡಕ್ಕೆ ಸಿಎಂ ನಾಯ್ಡು ಅನುಮೋದನೆ! ಕುತೂಹಲಕ್ಕೆ ಕಾರಣವಾದ ಸಿಎಂ ಚಂದ್ರಬಾಬು ನಾಯ್ಡು ನಿರ್ಧಾರ

ವಿಜಯವಾಡ(ನ.23): ಗುಜರಾತ್‌ನಲ್ಲಿ ಸರ್ದಾರ್ ಪಟೇಲರ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾದ ಬಳಿಕ, ದೇಶಾದ್ಯಂತ ಎತ್ತರದ ಪ್ರತಿಮೆ, ಸ್ಮಾರಕ, ಕಟ್ಟಡಗಳನ್ನು ನಿರ್ಮಿಸುವ ಸ್ಪರ್ಧೆ ಶುರುವಾಗಿದೆ.

ಅದರಂತೆ ಆಂಧ್ರ ಪ್ರದೇಶ ಹೊಸ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ವಿಧಾನಸಭೆ ಕಟ್ಟಡ, ಗುಜರಾತ್‌ನಲ್ಲಿ ಉದ್ಗಾಟನೆಯಾದ ‘ಏಕತಾ ಪ್ರತಿಮೆ’ಗಿಂತಲೂ ಎತ್ತರವಾಗಿರಲಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭವಿಷ್ಯದ ವಿಧಾನಸಭೆ ಕಟ್ಟಡದ ನೀಲನಕ್ಷೆಗೆ ಅನುಮೋದನೆ ನೀಡಿದ್ದು ಇದು 250 ಮೀಟರ್‌ ಎತ್ತರವಿರಲಿದೆ. ಅಂದರೆ 182 ಮೀಟರ್ ಎತ್ತರ ಇರುವ ಏಕತಾ ಪ್ರತಿಮೆಗಿಂತಲೂ 68 ಮೀಟರ್ ಹೆಚ್ಚು ಎತ್ತರವಾಗಿರಲಿದೆ.

ಸಿಎಂ ನಾಯ್ಡು ಈಗಾಗಲೇ ಕಟ್ಟಡ ವಿನ್ಯಾಸವನ್ನು ಬಹುತೇಕ ಅಂತಿಮಗೊಳಿಸಿದ್ದು ಯುಕೆ ಮೂಲದ ವಾಸ್ತುಶಿಲ್ಪಿ ನೋರ್ಮಾ ಫಾಸ್ಟರ್ಸ್ ಈ ವಿನ್ಯಾಸವನ್ನು ರೂಪಿಸಿದ್ದಾರೆ.

ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿರಲಿದ್ದು, ಉಲ್ಟಾ ಲಿಲ್ಲಿ ಹೂವಿನ ಆಕಾರದಲ್ಲಿ ಇರಲಿದೆ ಎಂದು ಪೌರಾಡಳಿತ ಸಚಿವ ಪಿ.ನಾರಾಯಣ ಹೇಳಿದ್ದಾರೆ. ಸರ್ಕಾರ ಕಟ್ಟಡ ನಿರ್ಮಾಣ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನು  ಅಂತಿಮಗೊಳಿಸಲು ಸುಮಾರು ಎರಡು ವರ್ಷ ಕಾಲ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸಿಎಂ ನಾಯ್ಡು, ಏಕತಾ ಪ್ರತಿಮೆಗಿಂತ ಎತ್ತರವಾದ ವಿಧಾನಸಭೆ ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ
ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ