ನಾಗಾಸಾಧುಗಳಿಗೂ ಸನಾತನ ಧರ್ಮ ರಕ್ಷಣೆಗೂ ಸಂಬಂಧವೇನು? ಈ ರಹಸ್ಯ ತಿಳಿದುಕೊಳ್ಳಿ!

ಈ ನಾಗಾಸಾಧುಗಳು ಯಾರು? ಯಾಕೆ ಅವರು ಈ ಮಹಾಕುಂಭಮೇಳಕ್ಕೆ ಆಗಮಿಸಿದ್ದಾರೆ? ಅವರು ಬೇರೆ ಸಮಯಗಳಲ್ಲಿ ಎಲ್ಲಿ ಇರುತ್ತಾರೆ? ಅವರ ಆಹಾರವಿಹಾರಗಳ ಪದ್ಧತಿಯೇನು? ಮಹಾಕುಂಭಮೇಳದಲ್ಲಿ ಅವರು ಭಾಗಿಯಾಗುವುದು ಇಡೀ ಸನಾತನ ಧರ್ಮಕ್ಕೆ...

Anchor Sowmya Krishna Hegde information about Nagasadhus secret in Sanatana Kathana

ಸದ್ಯ ಭಾರತದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Mahakumbha Mela) ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಕಾರಣ, ವಿಶ್ವದಲ್ಲಿ ನಡೆಯುವ ಎಲ್ಲಾ ಈವೆಂಟ್‌ಗಳಲ್ಲಿ ಇದೇ ಅತೀ ದೊಡ್ಡದು ಎಂಬ ಸುದ್ದಿಯೇ ಹಲವರನ್ನು ನಿಬ್ಬೆರಗಾಗಿಸಿದೆ. ಈ ಮಹಾಕುಂಭ ಮೇಳ ಪ್ರತಿ 144 ವರ್ಷಗಳಿಗೊಮ್ಮೆ ನಡೆಯುತ್ತದೆ. ಅಂದರೆ 12 ವರ್ಷಗಳಿಗೆ ನಡೆಯುವ ಕುಂಭ ಮೇಳದ 12 ಪಟ್ಟು ವರ್ಷಗಳ ಬಳಿಕ. ಕುಂಭ ಮೇಳಕ್ಕೆ ಹೋಲಿಸಿದರೆ ಈ ಮಹಾಕುಂಭ ಮೇಳವು ತುಂಬಾ ಮುಖ್ಯವಾದದ್ದು ಎನ್ನಲಾಗಿದೆ. 

Anchor Sowmya Krishna Hegde information about Nagasadhus secret in Sanatana Kathana

Latest Videos

ಈ ಮಹಾಕುಂಭ ಮೇಳದಲ್ಲಿ ಸಾಧುಸಂತರು, ಧಾರ್ಮಿಕ ಮುಖಂಡರು ಮಾತ್ರವಲ್ಲ, ಬಹಳಷ್ಟು ಆಧ್ಯಾತ್ಮಿಕ ಗುರುಗಳು, ಸಾಧಕರು ಹಾಗು ದೊಡ್ಡ ದೊಡ್ಡ ಬಿಸಿನೆಸ್‌ಮನ್‌ಗಳು ಕೂಡ ಭಾಗಿಯಾಗಿದ್ದಾರೆ. ಈ ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವ ಸಾಧು ಸಂತರ ಬಗ್ಗೆ, ಅಘೋರಿಗಳ ಬಗ್ಗೆ ಬಹಳಷ್ಟು ಜನರಿಗೆ ಏನೇನೂ ಗೊತ್ತಿಲ್ಲ. ಮುಖ್ಯವಾಗಿ ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ನಾಗಾಸಾಧುಗಳ ಬಗ್ಗೆ ಮಾಹಿತಿಯ ಕೊರತೆ ಇದೆ. 

ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!

ಈ ನಾಗಾಸಾಧುಗಳು ಯಾರು? ಯಾಕೆ ಅವರು ಈ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ? ಅವರು ಬೇರೆ ಸಮಯಗಳಲ್ಲಿ ಎಲ್ಲಿ ಇರುತ್ತಾರೆ? ಅವರ ಆಹಾರವಿಹಾರಗಳ ಪದ್ಧತಿಯೇನು? ಮಹಾಕುಂಭಮೇಳದಲ್ಲಿ ಅವರು ಭಾಗಿಯಾಗುವುದು ಇಡೀ ಸನಾತನ ಧರ್ಮಕ್ಕೆ, ಭಾರತಕ್ಕೆ ಅದೆಷ್ಟು ಮುಖ್ಯ? ಮುಂತಾದ ಎಲ್ಲ ಸಂಗತಿಗಳ ಬಗ್ಗೆ ಹಲವರಿಗೆ ಸರಿಯಾದ ಜ್ಞಾನವಿಲ್ಲ. ಹಾಗಿದ್ದರೆ ನಿಜವಾಗಿಯೂ ಈ ನಾಗಾಸಾಧುಗಳು, ನಾಗಾಬಾಬಾಗಳು ಯಾರು? ಅವರೇಕೆ ಹಾಗೆ ವಿಭಿನ್ನವಾಗಿ ಸಾಧನೆ ಮಾಡುತ್ತ ಇದ್ದಾರೆ? 

ಈ ಬಗ್ಗೆ ರೈಟರ್, ಆಂಕರ್ ಆಗಿ ಖ್ಯಾತಿ ಪಡೆದಿದ್ದ ಸೌಮ್ಯಾ ಕೃಷ್ಣ ಹೆಗಡೆ (Soumya Hegde) ಅವರು ತಮ್ಮ 'ಸನಾತನ ಕಥನ' ಎಂಬ ಯೂಟ್ಯೂಟ್ ಚಾನೆಲ್‌ನಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ. ಈ ನಾಗಾಸಾಧುಗಳು ಸನಾತನ ಧರ್ಮದ ರಕ್ಷಕರು. ಅವರು ಶಿವನನ್ನು ಹಾಗೂ ದತ್ತಾತ್ರೇಯರನ್ನು ಪೂಜಿಸುತ್ತಾರೆ. ಅವರು ಪಾರಂಪರಿಕ ಶಸ್ತ್ರಾಸ್ತಗಳನ್ನು ಬಳಸುತ್ತಾರೆ, ಅವರು ಈ ಪಾರಂಪರಿಕ ಶಸ್ತ್ರಾತ್ರ ಬಳಕೆಯನ್ನು ಶಾಸತ್ರೋಕ್ತವಾಗಿಯೇ ಕಲಿತಿರುತ್ತಾರೆ. ಅವರು ಆ ಮೂಲಕ ಧರ್ಮ ರಕ್ಷಣೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿರುತ್ತಾರೆ. 

ಸಹಜ ಸುಂದರಿ ಅಂತ ಹೊಗಳ್ತಾ ಇದ್ರೆ ಆ ಪೆದ್ದು ಹೋಗಿ ಬ್ಯೂಟಿ ಪಾರ್ಲರ್‌ನಲ್ಲಿ ಕುಂತೈತೆ!

ನಮ್ಮ ಭಾರತದಲ್ಲಿ ರಾಜಕೀಯ ಪಕ್ಷ ಯಾವುದೇ ಇರಲಿ, ಅವರು ಸನಾತಮ ಧರ್ಮದ ರಕ್ಷಕರಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಅವರು ಸಾಮಾನ್ಯವಾಗಿ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತ ಇರುವುದಿಲ್ಲ. ಅವರ ತಪಸ್ಸು, ತಮ್ಮದೇ ಆದ ದೈನಂದಿನ ಕಠಿಣ ಆಚರಣೆ ಹಾಗೂ ಧರ್ಮ ರಕ್ಷಣೆಗೆ ಬೇಕಾದ ತಯಾರಿಗಳಲ್ಲೇ ನಿರತರಾಗಿರುತ್ತಾರೆ. ಕುಂಭ ಮೇಳದಂತಹ ವಿಶೇಷ ಸಮಯದಲ್ಲಿ ಮಾತ್ರ ಅವರು ಜನಸಾಮಾನ್ಯರಿಗೆ ಕಾಣಸಿಗುತ್ತಾರೆ. ಅವರ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ, ನಾವೆಲ್ಲರೂ ಅವರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. 

ಸನಾತನ ಧರ್ಮ ರಕ್ಷಣೆಯಲ್ಲಿ ಈ ನಾಗಾಸಾಧುಗಳ ಪಾತ್ರ ತುಂಬಾ ಮುಖ್ಯವಾದ್ದು. ಉದಾಹರಣೆಗೆ, ಔರಂಗಜೇಬ ಭಾರತದ ಮೇಲೆ ದಾಳಿ ಮಾಡಿದಾಗ, ಆತನ 40,000 ಸೈನಿಕರನ್ನು ಕೇವಲ 4 ಸಾವಿರ ನಾಗಾಸಾಧುಗಳು ಎದುರಿಸಿ ಹಿಮ್ಮೆಟ್ಟಿಸಿದ್ದಾರೆ. ಅವರಲ್ಲಿ ಅಂತಹ ದೇಶಭಕ್ತಿ ಹಾಗೂ ಶಕ್ತಿ-ಯುಕ್ತಿ ಇದೆ. ಅಂಥವರ ಬಗ್ಗೆ ಈ ದೇಶದ, ಸನಾತನ ಧರ್ಮದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದನ್ನು ತಮ್ಮ ವಿಡಿಯೀ ಮೂಲಕ ಸೌಮ್ಯಾ ಹೆಗಡೆ ಹೊರಜಗತ್ತಿಗೆ ಗೊತ್ತುಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ಲಿಂಕ್ ನೋಡಿ.. 

vuukle one pixel image
click me!
vuukle one pixel image vuukle one pixel image