ಏನ್ ಬೇಕಾದ್ರು ಬರ್ಕೊಳ್ಳಿ,ಏನ್ ಬೇಕಾದ್ರು ಹಾಕೊಳ್ಳಿ: ಕೆಲ ಮಾಧ್ಯಮದವರು ಎಡಬಿಡಂಗಿಗಳು

Published : Sep 11, 2017, 11:25 PM ISTUpdated : Apr 11, 2018, 12:46 PM IST
ಏನ್ ಬೇಕಾದ್ರು ಬರ್ಕೊಳ್ಳಿ,ಏನ್ ಬೇಕಾದ್ರು ಹಾಕೊಳ್ಳಿ: ಕೆಲ ಮಾಧ್ಯಮದವರು ಎಡಬಿಡಂಗಿಗಳು

ಸಾರಾಂಶ

ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲಾ.

ಕುಮಟಾ(ಸೆ.11): ಇತ್ತೀಚಿಗಷ್ಟೆ ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು' ಏನ್ ಬೇಕಾದ್ರು ಬರ್ಕೊಳ್ಳಿ,ಏನ್ ಬೇಕಾದ್ರು ಹಾಕೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮ ಮಿತ್ರರು ಹೊರತುಪಡಿಸಿ ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲಾ. ಅವರಿಗೆ ಹೇಗೆ ಮಾತಾಡಬೇಕೆಂದು ಗೊತ್ತಿಲ್ಲ. ಹೇಗೆ ಬರೆಯಬೇಕೆಂದು ಗೊತ್ತಿಲ್ಲ. ಅಕ್ಷರದ ಬೆಲೆಯೂ ಗೊತ್ತಿಲ್ಲ. ಅವರ ಬದುಕು ಕೂಡ ಗೊತ್ತಿಲ್ಲ.

ನನ್ನ ಮಾತು ತೀಕ್ಷ್ಣವಾದರೆ ಕ್ಷಮಿಸಿಬಿಡಿ. ನನ್ನ ಜಿಲ್ಲೆಯವರು ಸಭ್ಯತೆಯ ಗೆರೆಯನ್ನು ದಾಟಿಲ್ಲ. ಕೆಲವರು ಎಡಬಿಡಂಗಿ ಪ್ರಶ್ನೆ ಕೇಳುತ್ತಾರೆ ಕೇಂದ್ರ ಮಂತ್ರಿಯಾಗಿದ್ದೀರಿ ಉತ್ತರ ಜಿಲ್ಲೆಗೆ ಏನು ಪ್ಯಾಕೇಜ್ ಕೊಡುತ್ತೀರಿ ಎಂದು ಒಬ್ಬ ಸಚಿವನಾಗಿ ನಾನು ಜಿಲ್ಲೆಗೆ ಪ್ಯಾಕೇಜ್ ಕೊಡಬೇಕು ಎನ್ನುವುದು ಮೂರ್ಖ ಪ್ರಶ್ನೆ. ರಾಜಕೀಯ ಎನ್ನುವುದು ಪ್ಯಾಕೇಜ್ ಕೊಡುವುದಕ್ಕಾಗಿ ಇರುವ ವ್ಯವಸ್ಥೆಯಲ್ಲ. ಒಬ್ಬ ಶಾಸಕರ ಆಯ್ಕೆಗಾಗಿ  5 ಕೋಟಿ ರೂ. ಪ್ಯಾಕೇಜ್, ಸಂಸದರ ಆಯ್ಕೆಗೆ ಸುಮಾರು  15–20 ಕೋಟಿ ಪ್ಯಾಕೇಜ್ ಎಂದು ನಿಗದಿ ಮಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.  ಕೆಲ ಮಾಧ್ಯಮದವದರು ಬೇಡದ ಅಪಪ್ರಚಾರ ಮಾಡುತ್ತಿದ್ದಾರೆ. ನಿಷ್ಠುರವಾಗಿ ಹೇಳುತ್ತೇನೆ ನಿಮ್ಮ ಪತ್ರಿಕೆ, ಮಾಧ್ಯಮಗಳಲ್ಲಿ ಏನು ಬೇಕಾದರೂ ಬರೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ.20ಕ್ಕೆ ನಿತಿನ್‌ ಬಿಜೆಪಿ ಅಧ್ಯಕ್ಷ?
ಫ್ರಾನ್ಸ್‌ : 350 ಟ್ರಾಕ್ಟರ್‌ ಜತೆ ಸಂಸತ್ತಿಗೆ ರೈತರ ಮುತ್ತಿಗೆ