
ನ್ಯೂಯಾರ್ಕ್(ಸೆ.11): ರಾಫೆಲ್ ನಡಾಲ್ 2017ರ ಅಮೆ ಓಪನ್ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದು ನಾಡಲ್'ನ 3ನೇ ಯುಎಸ್ ಹಾಗೂ 16ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ 6-3, 6-3, 6-4 ನೇರ ಸೆಟ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ವಿರುದ್ಧ ನಿರೀಕ್ಷೆಯಂತೆ ಸುಲಭ ಗೆಲುವು ಸಾಧಿಸಿದರು.
ವಿಶ್ವದ ನಂಬರ್ 1 ಆಟಗಾರ 2010 ಹಾಗೂ 2013ರಲ್ಲೂ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದು ಈ ವರ್ಷ ಅವರು ಗೆಲ್ಲುತ್ತಿರುವ 2ನೇ ಗ್ರ್ಯಾಂಡ್‌ಸ್ಲಾಂ. ಜೂನ್‌ನಲ್ಲಿ ದಾಖಲೆಯ 10ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟವನ್ನು ನಡಾಲ್ ಮುಡಿಗೇರಿಸಿಕೊಂಡಿದ್ದರು. ಈ ವರ್ಷ ನಡಾಲ್ ಗೆಲ್ಲುತ್ತಿರುವ ಒಟ್ಟಾರೆ 5ನೇ ಪ್ರಶಸ್ತಿ ಇದಾಗಿದೆ. ಅಲ್ಲದೇ ಅವರ ವೃತ್ತಿಬದುಕಿನಲ್ಲಿ ಇದು 74ನೇ ಪ್ರಶಸ್ತಿ. ಯುಎಸ್ ಓಪನ್ ಗೆಲುವಿನೊಂದಿಗೆ ನಡಾಲ್ ಅಂದಾಜು 23.66 ಕೋಟಿ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.