ಪಂಜಾಬ್ ದುರಂತ ಗಾಯಾಳುಗಳಿಗೆ ಮದರಸಾ ವಿದ್ಯಾರ್ಥಿಗಳಿಂದ ರಕ್ತದಾನ

By Web DeskFirst Published Oct 22, 2018, 7:37 PM IST
Highlights

ಒಮ್ಮೆಲೆ ನೂರಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಕಾರಣ ಎಲ್ಲರಿಗೂ ಏಕಕಾಲದಲ್ಲಿ ರಕ್ತ ಒದಗಿಸುವುದು ಕಷ್ಟವಾಗಿತ್ತು. ಹತ್ತಿರದಲ್ಲೆ ಇದ್ದ ಮದರಸಾ ವಿದ್ಯಾರ್ಥಿಗಳು ಗಾಯಾಳುಗಳ ನೆರವಿಗೆ ಬಂದು ಹಲವರ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ. 

ಅಮೃತ್'ಸರ್ (ಅ.22): ಅ.20ರಂದು ದಸರಾ ದುರ್ಗಾ ಪೂಜೆ ಸಂಭ್ರಮದಲ್ಲಿ ಭಕ್ತರ ಮೇಲೆ ರೈಲು ಹರಿದು ಭೀಕರ ಅಪಘಾತವುಂಟಾಗಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಾರು ಜನರು ಗಾಯಗೊಂಡಿದ್ದರು.

ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರಿಗೆ ಸ್ಥಳೀಯ ಮದರಸಾ ವಿದ್ಯಾರ್ಥಿಗಳು ರಕ್ತದಾನ ಮಾಡಿ ಸೌಹಾರ್ದತೆ ಮೆರೆಯುವುದರೊಂದಿಗೆ ಬಹುಬೇಗ ಗುಣಮುಖರಾಗುವಂತೆ ಲೂಧಿಯಾನದ ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಒಮ್ಮೆಲೆ ನೂರಾರು ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಕಾರಣ ಎಲ್ಲರಿಗೂ ಏಕಕಾಲದಲ್ಲಿ ರಕ್ತ ಒದಗಿಸುವುದು ಕಷ್ಟವಾಗಿತ್ತು. ಹತ್ತಿರದಲ್ಲೆ ಇದ್ದ ಮದರಸಾ ವಿದ್ಯಾರ್ಥಿಗಳು ಗಾಯಾಳುಗಳ ನೆರವಿಗೆ ಬಂದು ಹಲವರ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ. 

ರಾವಣ ದಹನ ಸಮಾರಂಭದ ವೇಳೆ ಎರಡು ಹಳಿಗಳ ಮೇಲೆ ಎರಡೂ ಕಡೆಯಿಂದ ಒಂದೇ ಬಾರಿ ರೈಲುಗಳು ಬರುತ್ತಿದ್ದವು. ಸ್ಥಳದಲ್ಲಿದ್ದವರು ಒಂದು ರೈಲನ್ನು ಮಾತ್ರ ಗಮನಿಸಿ ಮತ್ತೊಂದು ಹಳಿಯತ್ತ ಸಾಗಿದರು. ಅದೇ ಸಮಯದಲ್ಲಿ ಅತ್ತಲಿಂದಲೂ ವೇಗವಾಗಿ ಬಂದ ಮತ್ತೊಂದು ರೈಲು ಜನರ ಮೇಲೆ ಹರಿಯಿತು. ಕಾರ್ಯಕ್ರಮವನ್ನು ಪಂಜಾಬ್‌ ಸಚಿವ ನವಜೋತ್‌ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಆಯೋಜಿಸಿದ್ದರು.

click me!