ವಿದೇಶಿ ಕಂಪನಿಗಳ ನೋಂದಣಿಯಿಂದ ದೇಶಕ್ಕೆ ಬರುವ ಆದಾಯದಲ್ಲಿ ಇಳಿಮುಖ!

Published : Apr 07, 2017, 10:46 AM ISTUpdated : Apr 11, 2018, 12:44 PM IST
ವಿದೇಶಿ ಕಂಪನಿಗಳ ನೋಂದಣಿಯಿಂದ ದೇಶಕ್ಕೆ ಬರುವ ಆದಾಯದಲ್ಲಿ ಇಳಿಮುಖ!

ಸಾರಾಂಶ

ದೇಶದಲ್ಲಿ ಒಟ್ಟು 3384 ವಿದೇಶಿ ಕಂಪನಿಗಳು ಕಾರ್ಯಾಚರಿಸುತ್ತಿದ್ದು, ಅತೀ ಹೆಚ್ಚು ವಿದೇಶಿ ಕಂಪನಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು 3ನೇ ಸ್ಥಾನದಲ್ಲಿದೆ.

ನವದೆಹಲಿ (ಏ.07): ವಿದೇಶಿ ಕಂಪನಿಗಳ ನೋಂದಣಿ ಹಾಗೂ ಇತರ ಸೇವೆಗಳಿಂದ ದೇಶದ ಬೊಕ್ಕಸಕ್ಕೆ ಬರುವ ಆದಾಯವು  ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

2014-15ರಲ್ಲಿ 1,216.08 ಲ.ರೂ.ಗಳಷ್ಟಿದ್ದ ಆದಾಯವು 2017-18ರ ಆರ್ಥಿಕ ವರ್ಷಕ್ಕೆ 996.18 ಲ.ರೂ.ಗಳಿಗೆ ಕುಸಿದಿದೆ.

ಕ್ರ.ಸಂ

ಆರ್ಥಿಕ ವರ್ಷ

ವಿದೇಶಿ ಕಂಪನಿಗಳಿಂದ ಬಂದ ಮೊತ್ತ ( ರೂ. ಲಕ್ಷಗಳಲ್ಲಿ)

1

2014-15

1,216.08

2

2015-16

1,174.44

3

2016-17

   996.18

4

2017-18*

       4.62

           ಒಟ್ಟು

3,391.32

* 05.04.2017 ವರೆಗೆ

ವಿದೇಶಿ ಕಂಪನಿಗಳ ನೋಂದಣಿ:

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ನೋಂದಾಯಿಸಲ್ಪಟ್ಟ ವಿದೇಶಿ ಕಂಪನಿಗಳ ಸಂಖ್ಯೆಯಲ್ಲೂ ವಿಶೇಷವಾದ ಪ್ರಗತಿಯಾಗಿಲ್ಲ. 2014-15ರಲ್ಲಿ 157 ಕಂಪನಿಗಳು ಭಾರತದಲ್ಲಿ ನೋಂದಣಿಯಾಗಿದ್ದರೆ, ಬಳಿಕದ ವರ್ಷದಲ್ಲಿ 149 ಕಂಪನಿಗಳು ನೋಂದಣಯಾಗಿವೆ. ಕಳೆ ಆರ್ಥಿಕ ವರ್ಷದಲ್ಲಿ 161 ವಿದೇಶಿ ಕಂಪನಿಗಳು ಭಾರತದಲ್ಲಿ ನೋಂದಾಯಿಸಲ್ಪಟ್ಟಿವೆ.

ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ ನೊಂದಾಯಿಸಲ್ಪಟ್ಟ ವಿದೇಶಿ ಕಂಪನಿಗಳ ಸಂಖ್ಯೆ 128 ಆಗಿದ್ದರೆ, ಮಹಾರಾಷ್ಟ್ರದಲ್ಲಿ 141 ಹೊಸ ಕಂಪನಿಗಳು ನೊಂದಾಯಿಸಲ್ಪಟ್ಟಿವೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೊಂದಾಯಿಸಲ್ಪಟ್ಟ ಕಂಪನಿಗಳ ಸಂಖ್ಯೆ 50 ಆಗಿದೆ.

3ನೇ ಸ್ಥಾನದಲ್ಲಿ ಕರ್ನಾಟಕ:

ದೇಶದಲ್ಲಿ ಒಟ್ಟು 3384 ವಿದೇಶಿ ಕಂಪನಿಗಳು ಕಾರ್ಯಾಚರಿಸುತ್ತಿದ್ದು, ಅತೀ ಹೆಚ್ಚು ವಿದೇಶಿ ಕಂಪನಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು 3ನೇ ಸ್ಥಾನದಲ್ಲಿದೆ.

ಒಟ್ಟು ಕಂಪನಿಗಳ ಪೈಕಿ ದೆಹಲಿಯು ಸಿಂಹಪಾಲು (1484) ಹೊಂದಿದ್ದು ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (823) ದ್ವಿತೀಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ನೋಂದಣಿಯಾಗಿರುವ ವಿದೇಶಿ ಕಂಪನಿಗಳ ಸಂಖ್ಯೆ 272 ಆಗಿದೆ.

ಹರ್ಯಾಣದಲ್ಲಿ 263, ವಿದೇಶಿ ಕಂಪನಿಗಳು ನೋಂದಣಿಯಾಗಿದ್ದರೆ, ತಮಿಳುನಾಡಿನಲ್ಲಿ 212, ಗುಜರಾತ್’ನಲ್ಲಿ 54 ಹಾಗೂ ಆಂಧ್ರ ಪ್ರದೇಶದಲ್ಲಿ 53 ವಿದೇಶಿ ಕಂಪನಿಗಳು ಕಾರ್ಯಾಚರಿಸುತ್ತಿವೆ.

ಉಳಿದಂತೆ ಉತ್ತರ ಪ್ರದೇಶ (64), ತೆಲಾಂಗಣ (24) ಹಾಗೂ ಪ.ಬಂಗಾಳದಲ್ಲಿ (57) ವಿದೇಶಿ ಕಂಪನಿಗಳನ್ನು ಹೊಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ