ಅಮಿತ್ ಷಾ ಭೇಟಿಗೆ ಅಡ್ಡಿಯಾಯ್ತು ಉಪರಾಷ್ಟ್ರಪತಿ ಚುನಾವಣೆ; ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆ

By Suvarna Web DeskFirst Published Jul 15, 2017, 4:38 PM IST
Highlights

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಮುಂದಿನ ತಿಂಗಳು ಆಗಮಿಸಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿಯನ್ನು ಸಜ್ಜುಗೊಳಿಸಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆ ಆಗಲು ಕಾರಣ ಇಲ್ಲಿದೆ. ​

ಬೆಂಗಳೂರು (ಜು.15):  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಮುಂದಿನ ತಿಂಗಳು ಆಗಮಿಸಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿಯನ್ನು ಸಜ್ಜುಗೊಳಿಸಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆ ಆಗಲು ಕಾರಣ ಇಲ್ಲಿದೆ. ​

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ.  ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಆಗಸ್ಟ್ 3,4 ಹಾಗೂ 5ರಂದು ರಾಜ್ಯದಲ್ಲಿ ವಾಸ್ತವ್ಯ ಹೂಡಿ ಸರಣಿ ಸಭೆ-ಸಮಾವೇಶಗಳ ನಡೆಸಲು ಅಮಿತ್ ಷಾ ತೀರ್ಮಾನಿಸಿದ್ದರು.  ಆದರೆ ಇದೀಗ ಹಠಾತ್ತಾಗಿ ಅಮಿತ್ ಷಾ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಭೇಟಿ ಕಾರ್ಯಕ್ರಮ ಮುಂದೂಡಿಕೆಯಾಗಲು ಮುಖ್ಯ ಕಾರಣ ಉಪರಾಷ್ಟ್ರಪತಿ ಚುನಾವಣೆ. ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಆಗಸ್ಟ್ 3-5 ರವರೆಗೆ ರಾಜ್ಯದಲ್ಲಿ ವಾಸ್ತವ್ಯ ಹೂಡಬೇಕಿದ್ದ ಅಮಿತ್ ಷಾ ತಮ್ಮ ಕಾರ್ಯಕ್ರಮವನ್ನ ಒಂದು ವಾರ ಮುಂದೂಡಿದ್ದಾರೆ. ಆಗಸ್ಟ್ 12ರಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಷಾ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ಸರಣಿ ಸಭೆ - ಸಮಾವೇಶಗಳ ನಡೆಸಲಿದ್ದಾರೆ.

 ಅಮಿತ್ ಷಾ ರಾಜ್ಯ ಭೇಟಿ ಮುಂದೂಡಿಕೆಯಾಗಿದ್ದರೂ ಕೂಡ ಅವರ ಕಾರ್ಯಕ್ರಮಗಳ ರೂಪುರೇಷೆಯಲ್ಲೇನೂ ಬದಲಾವಣೆ ಇಲ್ಲ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ರಾಜ್ಯ ಪದಾಧಿಕಾರಿಗಳ ಸಭೆ ಸೇರಿದಂತೆ ಪ್ರಮುಖ ಮುಖಂಡರ ಜತೆ ನಿಗದಿತ ಸಭೆಗಳು ನಡೆಯಲಿವೆ. ಅಷ್ಟೇ ಅಲ್ಲದೇ, ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ರೋಡ್ ಮ್ಯಾಪ್​ ಕೂಡ ಇದೇ ವೇಳೆ ಸಿದ್ದಗೊಳ್ಳಲಿದೆ. ಒಟ್ಟಾರೆ, ಉಪರಾಷ್ಟ್ರಪತಿ ಚುನಾವಣೆಯಿಂದಾಗಿ ಅಮಿತ್ ಷಾ ರಾಜ್ಯ ಭೇಟಿ ಮುಂದೂಡಿಕೆಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಒಳಬೇಗುದಿಯಂತಿರುವ ಭಿನ್ನಮತದ ಬೇಗೆಯನ್ನ ಅಮಿತ್ ಷಾ ಬಂದು ಎಷ್ಟು ಬೇಗ ತಣಿಸುತ್ತಾರೋ ಎಂದು ಕಾಯುತ್ತಿದ್ದ ನಾಯಕರು ಇನ್ನಷ್ಟು ದಿನ ಕಾಯಬೇಕಿದೆ.

click me!