
ಮುಂಬೈ: ಸಂಕಷ್ಟಕ್ಕೀಡಾಗಿರುವ ಉತ್ತರ ಪ್ರದೇಶದ ರೈತರ ನೆರವಿಗೆ ನಟ ಅಮಿತಾಭ್ ಬಚ್ಚನ್ ಮುಂದಾಗಿದ್ದಾರೆ.
ರಾಜ್ಯದ 850 ಅನ್ನದಾತರ ಸಾಲ ತೀರಿಸಲು ತಾವು ನಿರ್ಧರಿಸಿದ್ದು, ಅಂಥ ರೈತರ ಪಟ್ಟಿಯೊಂದನ್ನು ಸಿದ್ಧಪಡಿಸಿರುವುದಾಗಿ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
‘ನಮಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ರೈತರಿಗಾಗಿ ಒಂದಿಷ್ಟುಕೊಟ್ಟಾಗ ಜೀವನ ಸಾರ್ಥಕವೆನಿಸುತ್ತದೆ. ಮಹಾರಾಷ್ಟ್ರದಲ್ಲಿ ಸಾಲ ಕಟ್ಟಲು ಕಷ್ಟಪಡುತ್ತಿದ್ದ 350 ರೈತರ ಸಾಲ ತೀರಿಸಿದ್ದೇನೆ. ಅದೇ ರೀತಿ ಇದೀಗ 5.5 ಕೋಟಿ ಸಾಲ ಇರುವ ಉತ್ತರ ಪ್ರದೇಶದ 850 ರೈತರ ಪಟ್ಟಿಯೊಂದನ್ನು ತರಿಸಿಕೊಂಡಿದ್ದೇನೆ,’ ಎಂದು ಹೇಳಿದ್ದಾರೆ.
ಅಲ್ಲದೆ, ಬಲವಂತದ ವೇಶ್ಯಾವಾಟಿಕೆ ವಿರುದ್ಧ ಮತ್ತು ಅಪಹರಣಕ್ಕೊಳಗಾಗುವ ಯುವತಿಯರನ್ನು ರಕ್ಷಣೆ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅಜೀತ್ ಸಿಂಗ್ ಅವರಿಗೆ ನೆರವು ನೀಡುವುದಾಗಿಯೂ ಇದೇ ವೇಳೆ ಬಿಗ್‌ಬಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.