
ಬೆಂಗಳೂರು (ಮಾ.25): ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಮುಖಂಡರು ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಕಾಲಿಗೆ ಚಕ್ರ ಕಟ್ಟಿಕೊಂಡು ನಿಂತಿದ್ದಾರೆ. ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವ ಹಂಬಲ, ಬಿಜೆಪಿಗೆ ಕಾಂಗ್ರೆಸ್ ಕಿತ್ತೊಗೆಯಬೇಕೆನ್ನುವ ಛಲ ಹೀಗಾಗಿ ಎರಡು ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಮತ್ತೆ -ಮತ್ತೆ ರಾಜ್ಯಕ್ಕೆ ಬರ್ತಾ ಇದ್ದಾರೆ. ರಾಹುಲ್ ಗಾಂಧಿ ಎರಡು ದಿನ ಪ್ರವಾಸ ಮುಗಿಸಿ ದೆಹಲಿ ವಿಮಾನ ಏರುತ್ತಿದ್ದಂತೆ ಅಮಿತ್ ಶಾ ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ.
ಇಂದು ರಾತ್ರಿ 10 :30 ಕ್ಕೆ ಕೆಂಪೇಗೌಡ ಏರ್ಪೊರ್ಟ್ ಗೆ ಬಂದಿಳಿಯಲಿರುವ ಅಮಿತ್ ಶಾ, ನೇರವಾಗಿ ತಾಜ್ ವಿವಾಂತ್ ಹೊಟೆಲ್ ಗೆ ಬಂದು ತಂಗಲ್ಲಿದ್ದಾರೆ. ಬೆಳಗ್ಗೆ ಸರಿಯಾಗಿ 8.45 ಕ್ಕೆ ಹ್ಯಾಲಿಕ್ಯಾಪ್ಟರನಲ್ಲಿ ತುಮಕೂರಿಗೆ ಹೊರಡಲಿರುವ ಬಿಜೆಪಿ ಚಾಣಕ್ಯ 9.30 ಕ್ಕೆ ತುಮಕೂರು ತಲುಪಲಿದ್ದಾರೆ. ಅಲ್ಲಿಂದ 9.40 ಕ್ಕೆ ಸಿದ್ದಗಂಗಾ ಮಠಕ್ಕೆ ತೆರಳಿ ಶತಾಯುಶಿ ಸಿದ್ದಗಂಗಾ ಶ್ರೀಗಳ ಆಶಿರ್ವಾದ ಪಡೆಯಲಿದ್ದಾರೆ.
ಶ್ರೀಗಳ ಆಶಿರ್ವಾದ ಪಡೆದು ಬಳಿಕ ತಿಪಟೂರಿಗೆ ತೆರಳಿ ತೆಂಗು ಬೆಳೆಗಾರರ ಜೊತೆ ಚರ್ಚೆ ನಡೆಸಲಿದ್ದಾರೆ. ಆದಾದ ಬಳಿಕ ತಿಪಟೂರಿನಿಂದ ಶಿವಮೊಗ್ಗ ಜಿಲ್ಲೆಗೆ ತರಳಲಿರುವ ಶಾ, ಕವಿಶೈಲಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ತಿರ್ಥಹಳ್ಳಿ, ಅದಾದ ಬಳಿಕ ಶಿವಮೊಗ್ಗ ಸಿಟಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೊ ಬಳಿಕ ನಿಗದಿಯಾಗಿರುವ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ರಾತ್ರಿ ಕೆ ಎಸ್ ಈಶ್ವರಪ್ಪ ನಿವಾಸದಲ್ಲಿ ಊಟ ಮಾಡಲಿರುವ ಅಮಿತ್ ಶಾಗೆ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಸಾಥ್ ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.