
ಬೆಂಗಳೂರು (ಮಾ. 25): ರಾಹುಲ್ ಗಾಂಧಿ ಹಾಗೂ ಬಂಡಾಯ ಶಾಸಕರ ವಿರುದ್ದ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಕದಲ್ಲಿ ಕೂತು ಕೆಮ್ಮಿದ್ರೆ ಕಾಂಗ್ರೆಸ್ ಸರ್ವನಾಶವಾಗುತ್ತೆ. ಬಿಜೆಪಿ ಜೊತೆ ಕೈ ಜೊಡಿಸ್ತಿದ್ದಾರೆ ಅಂತಾ ಇದಕ್ಕೂ ಬಣ್ಣ ಕಟ್ಟಿದ್ರು. ನಮಗೆ ಎರಡೂ ಪಕ್ಷಗಳ ಸಹವಾಸವೂ ಬೇಡ. ರಾಹುಲ್ ಗಾಂಧಿ ಪ್ರವಾಸದ ಬಳಿಕ ಮಾಗಡಿಯಲ್ಲಿ ಸಭೆ ಮಾಡ್ತಾರೆ. ಜೆಡಿಎಸ್ ಪಕ್ಷವನ್ನ ಕಟ್ಟಿದ್ದು ನಾವು ಅಂತಾರೆ. ಅಲ್ಲೆಲ್ಲೋ ಇಸ್ಪೀಟ್ ಆಡ್ತಾ ಕೂತಿದ್ರು. ಕಾಂಗ್ರೆಸ್ ಪಕ್ಷ ಕಟ್ಟಿ, ಜೆಡಿಎಸ್ ಪಕ್ಷ ನಿರ್ನಾಮ ಮಾಡ್ತೀನಿ ಅಂತಾರೆ. ಇವರೆಂತವರು ಅನ್ನೋದು ನನಗೆ ಗೊತ್ತಿದೆ ಎಂದು ಎಚ್’ಡಿಕೆ ಹೇಳಿದ್ದಾರೆ.
ನಾವು ದೇವೇಗೌಡರ ಮಕ್ಕಳು. ನಮ್ಮದು ಒಳಗೊಂದು, ಹೊರಗೊಂದು ಇಲ್ಲ. ನಾವು ಯಾವತ್ತೂ ಹೆದರಿ ರಾಜಕಾರಣ ಮಾಡಿಲ್ಲ. ಅಧಿಕಾರ ಇರೋರ ಮುಂದೆ ನಿಮ್ಮಂತೆ ಸ್ವಾಭಿಮಾನ ಅಡವಿಟ್ಟು ರಾಜಕೀಯ ಮಾಡಿಲ್ಲ. ನನ್ನನ್ನ ಕೆಣಕಬೇಡಿ. ರಂಗನಾಥ ಸ್ವಾಮಿ ನೋಡ್ಕೋತಾನೆ ಎಂದಿದ್ದಾರೆ.
ನನ್ನ ಸರ್ಕಾರ ಬರೋದು ಯಾರೂ ತಪ್ಪಿಸೋಕೆ ಆಗಲ್ಲ. ಕಾರ್ಯಕರ್ತರಲ್ಲಿ ಮನವಿ ಗಲಾಟೆ ಮಾಡಿಕೊಳ್ಳಬೇಡಿ. ನನ್ನ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸಿದ್ರೆ ವಜಾ ಮಾಡಿಸುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.