ರೆಸಾರ್ಟ್'ಗೆ ಬಂದ ಶಾಸಕರು ವಾಪಸ್ ಹೋಗಬೇಕಂತೆ ...!

By Suvarna Web DeskFirst Published Jul 29, 2017, 7:45 PM IST
Highlights

ರಾಜ್ಯಸಭಾ ಚುನಾವಣೆ ಗುಜರಾತ್ ರಾಜಕಾರಣವನ್ನೇ ಅಲ್ಲಾಡಿಸಿಬಿಟ್ಟಿದೆ. ಬಿಜೆಪಿ ಉರುಳಿಸಿರುವ ದಾಳಕ್ಕೆ ತತ್ತರಿಸಿರುವ ಕಾಂಗ್ರೆಸ್  ತನ್ನ ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದೆ. ಹೀಗಾಗಿ ೪೪ ಶಾಸಕರನ್ನು  ಬೆಂಗಳೂರಿಗೆ ಕಳುಹಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ಹೈಫೈ ಸೌಲಭ್ಯ ಪಡೆಯುತ್ತಿದ್ದಾರೆ. ಇಂದು ಬೆಳಗಿನ ಜಾವ ಎರಡು ತಂಡವಾಗಿ ೪೦ ಶಾಸಕರು ಬೆಂಗಳೂರಿಗೆ ಬಂದಿದ್ದು, ರಾಮನಗರದ ಬಿಡದಿ ರೆಸಾರ್ಟ್ ನಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್​ ಉಸ್ತುವಾರಿಯಲ್ಲಿ ಆತಿಥ್ಯ ಒದಗಿಸಲಾಗುತ್ತಿದೆ.

ಬೆಂಗಳೂರು(ಜು.29): ರಾಜ್ಯಸಭೆ ಚುನಾವಣೆಗೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯಿಂದ ಬೆಂಗಳೂರಿನ ಬಿಡದಿಯ ಈಗಲ್'ಟನ್ ರೆಸಾರ್ಟ್'ನಲ್ಲಿ ಬೀಡುಬಿಟ್ಟಿರುವ ಗುಜರಾತ್'ನ ಕಾಂಗ್ರೆಸ್ ಶಾಸಕರಲ್ಲಿ ಮೂವರು ತಮ್ಮ ಊರಿಗೆ ವಾಪಸ್ ಹೋಗಬೇಕೆಂದು ಹಠ ಹಿಡಿದಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಪ್ರವಾಸ ಪರಿಸ್ಥಿತಿ ಇರುವ ಕಾರಣ ವಾಪಸ್ ಹೋಗಬೇಕೆಂದು ಮೂವರು ಶಾಸಕರಾದ ಖನಪುರ ಧಾರ್ಶಿಭಾಯ್ ಲಖಾಭಾಯ್ ( ಕಂಕ್ರೇಜ್ ಕ್ಷೇತ್ರ),ಪಠೇಲ್ ಮಹೇಶ್ ಕುಮಾರ್ ( ಫಾಲನ್ ಪುರ್ ಕ್ಷೇತ್ರ) ಹಾಗೂ ರಬರಿ ಗೋವಾಭಾಯ್( ದೀಸಾ ಕ್ಷೇತ್ರ) ಅವರು ವ್ಯವಸ್ಥಾಪಕ ನರೇಶ್ ರಾವಲ್ ಜೊತೆ ವಾಗ್ವಾದ ನಡೆಸಿದ್ದಾರೆ. ಅದಲ್ಲದೆ ಈ ಮೂವರು ಶಾಸಕರಿಗೆ ಮೊಬೈಲ್ ನಿರಾಕರಿಸಲಾಗಿದೆ.

Latest Videos

ರಾಜ್ಯಸಭಾ ಚುನಾವಣೆ ಗುಜರಾತ್ ರಾಜಕಾರಣವನ್ನೇ ಅಲ್ಲಾಡಿಸಿಬಿಟ್ಟಿದೆ. ಬಿಜೆಪಿ ಉರುಳಿಸಿರುವ ದಾಳಕ್ಕೆ ತತ್ತರಿಸಿರುವ ಕಾಂಗ್ರೆಸ್  ತನ್ನ ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದಿದೆ. ಹೀಗಾಗಿ ೪೪ ಶಾಸಕರನ್ನು  ಬೆಂಗಳೂರಿಗೆ ಕಳುಹಿಸಿದ್ದು, ಖಾಸಗಿ ರೆಸಾರ್ಟ್ ನಲ್ಲಿ ಹೈಫೈ ಸೌಲಭ್ಯ ಪಡೆಯುತ್ತಿದ್ದಾರೆ. ಇಂದು ಬೆಳಗಿನ ಜಾವ ಎರಡು ತಂಡವಾಗಿ ೪೦ ಶಾಸಕರು ಬೆಂಗಳೂರಿಗೆ ಬಂದಿದ್ದು, ರಾಮನಗರದ ಬಿಡದಿ ರೆಸಾರ್ಟ್ ನಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್​ ಉಸ್ತುವಾರಿಯಲ್ಲಿ ಆತಿಥ್ಯ ಒದಗಿಸಲಾಗುತ್ತಿದೆ.

ಇನ್ನು ರೆಸಾರ್ಟ್ ನಲ್ಲಿ ಶಾಸಕರಿಗೆ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯ ಕಲ್ಪಿಸಲಾಗಿದ್ದು, ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಮತ್ತು ದೇವಸ್ಥಾನಗಳಿಗೆ ಕರೆದೊಯ್ಯುವ ಚಿಂತನೆಯೂ ನಡೆದಿದೆ. ಉಸ್ತುವಾರಿ ವಹಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ‌ಮುಖಾಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್​ಗೆ ಶಾಸಕರ ದಿನಚರಿ ಮಾಹಿತಿ ರವಾನೆಯಾಗ್ತಿದೆ.

ಇನ್ನೊಂದೆಡೆ ಇನ್ನೂ ನಾಲ್ಕು ಶಾಸಕರು ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಆಗಸ್ಟ್ 8 ರಂದು ರಾಜ್ಯಸಭಾ ಚುನಾವಣೆಯ ಮತದಾನವಿದ್ದು, ಆಗಸ್ಟ್ 7ರವರೆಗೂ ಎಲ್ಲಾ ಶಾಸಕರು ಇಲ್ಲೇ ಉಳಿಯಲಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಇಡೀ ದೇಶದ ಕಣ್ಣೀಗ ರಾಜ್ಯದ ಮೇಲೆ ಬಿದ್ದಿದೆ. ಅದರಲ್ಲೂ ಪ್ರಧಾನಿಯವರ ತವರು ಗುಜರಾತ್​ ರಾಜಕಾರಣ ನಮ್ಮ ರಾಜ್ಯಕ್ಕೆ ಶಿಫ್ಟ್​ ಆಗಿರೋದು ಈಗ ಕುತೂಹಲ ಕೆರಳಿಸಿದೆ.

click me!