ಬದಲಾಗುತ್ತಾ ಬಿಜೆಪಿ ರಾಷ್ಟ್ರಾಧ್ಯಕ್ಷ ಪಟ್ಟ..?

By Web DeskFirst Published Sep 9, 2018, 8:55 AM IST
Highlights

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್‌ ಶಾ ಅವರ ಮೂರು ವರ್ಷಗಳ ಅವಧಿ ಇನ್ನು ಕೆಲವೇ ತಿಂಗಳಲ್ಲಿ ಮುಕ್ತಾಯವಾಗಲಿದೆ. 2019ರ ಜನವರಿಗೆ ಮುಗಿಯಲಿದೆ. ಲೋಕಸಭಾ ಚುನಾವಣೆಗೆ ಅಮಿತ್ ಶಾ ನಾಯಕತ್ವವನ್ನೇ ಮುಂದುವರಿಸಲಾಗುತ್ತದೆ. 

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಮಿತ್‌ ಶಾ ಅವರನ್ನೇ ರಾಷ್ಟ್ರಾ ಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿರ್ಧರಿಸಿದೆ.

ಅಮಿತ್‌ ಶಾ ಅವರ ಮೂರು ವರ್ಷಗಳ ಅವಧಿ 2019ರ ಜನವರಿಗೆ ಮುಗಿಯಲಿದೆ. ಹೀಗಾಗಿ ನೂತನ ಅಧ್ಯಕ್ಷರ ಆಯ್ಕೆಗೆ ಆಂತರಿಕ ಚುನಾವಣೆಯನ್ನು ಬಿಜೆಪಿ ನಡೆಸಬೇಕಾಗಿದೆ. ಲೋಕಸಭೆ ಚುನಾವಣೆಗೂ ಅಮಿತ್‌ ಶಾ ನಾಯಕತ್ವ ಇರಲಿ ಎಂಬ ಕಾರಣಕ್ಕೆ ಆಂತರಿಕ ಚುನಾವಣೆಯನ್ನೇ ಮುಂದೂಡಲು ಶನಿವಾರದಿಂದ ದೆಹಲಿಯಲ್ಲಿರುವ ಆರಂಭವಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧರಿಸಿದೆ.

ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ ಸಿಂಗ್‌ ಅವರು ಮೋದಿ ಸಂಪುಟಕ್ಕೆ ಸೇರಿದ ಬಳಿಕ ಅಮಿತ್‌ ಶಾ ಅವರು 2014ರ ಆಗಸ್ಟ್‌ನಲ್ಲಿ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಾಜನಾಥ ಸಿಂಗ್‌ ಅವರ ಮೂರು ವರ್ಷ ಅವಧಿಯನ್ನು 2016ರ ಜನವರಿಯಲ್ಲಿ ಮುಗಿಸಿದ್ದರು. ಆನಂತರ ಅಮಿತ್‌ ಶಾ ಅವರೇ ಅಧ್ಯಕ್ಷರಾಗಿ ಆಯ್ಕೆಯಾದರು. ಆ ಮೂರು ವರ್ಷಗಳ ಅವಧಿ 2019ರ ಜನವರಿಗೆ ಮುಕ್ತಾಯಗೊಳ್ಳಲಿದೆ.

ಬಿಜೆಪಿಯ ಸಂವಿಧಾನದ ಪ್ರಕಾರ, ಬಿಜೆಪಿ ಅಧ್ಯಕ್ಷರಾದವರಿಗೆ ಗರಿಷ್ಠ ಎಂದರೆ ಮೂರು ವರ್ಷಗಳ ಎರಡು ಅವಧಿ ಸಿಗುತ್ತದೆ. ಅದನ್ನು ಅಮಿತ್‌ ಶಾ ಪೂರ್ಣಗೊಳಿಸಿದ್ದಾರೆ.

click me!