‘ಕಾಂಗ್ರೆಸ್ ನಂತಹ ವಿರೋಧ ಪಕ್ಷ ಇರುವುದೇ ನಮ್ಮ ಅದೃಷ್ಟ’..!

First Published Jun 9, 2018, 2:46 PM IST
Highlights

‘ಕಾಂಗ್ರೆಸ್ ನಂತಹ ವಿರೋಧ ಪಕ್ಷವಿರುವುದು ನಮ್ಮ ಅದೃಷ್ಟ’
‘ಕೈ’ನತ್ತ ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಅಧ್ಯಕ್ಷ
ನಿಮ್ಮ ೭೦ ವರ್ಷದ ಆಡಳಿತದ ಲೆಕ್ಕ ಕೊಡಿ ಎಂದ ಶಾ
ರಾಹುಲ್ ರನ್ನು ‘ಬಬುವಾ’ ಎಂದು ಲೇವಡಿ ಮಾಡಿದ ಶಾ

ನವದೆಹಲಿ (ಜೂ.9): ಕಾಂಗ್ರೆಸ್ ನಂತಹ ವಿರೋಧ ಪಕ್ಷ ಹೊಂದಿರುವುದು ನಮ್ಮ ಅದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಜೈಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ಯಾವುದೇ ಜನಪರ ಕೆಲಸ ಮಾಡಿಲ್ಲ ಎಂದು ಸುಳ್ಳು ಪ್ರಚಾರ ನಡೆಸುವುದೇ ಕಾಂಗ್ರೆಸ್ ಪಕ್ಷದ ಕೆಲಸವಾಗಿದ್ದು, ಭಾರತವನ್ನು ದಶಕಗಳ ಕಾಲ ಆಳಿದ ಅವರ ಮೂರು ತಲೆಮಾರುಗಳ ಲೆಕ್ಕವನ್ನು ಮಾತ್ರ ನೀಡುತ್ತಿಲ್ಲ ಎಂದು ಶಾ ಹರಿಹಾಯ್ದಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಕೇವಲ ಕೆಲ ಉಪ ಚುನಾವಣೆಗಳನ್ನು ಗೆದ್ದ ಮಾತ್ರಕ್ಕೆ ಬಿಗುತ್ತಿರುವುದನ್ನು ನೋಡಿದರೆ ನಗು ಬರುತ್ತದೆ ಎಂದು ಶಾ ವ್ಯಂಗ್ಯವಾಡಿದರು. 

ಇದೇ ವೇಳೆ ರಾಹುಲ್ ಗಾಂಧಿಯವರನ್ನು ಬಬುವಾ (ಜಿಜ್ಞಾಸೆ ಹೊಂದಿರುವ ವ್ಯಕ್ತಿ) ಎಂದು ಕರೆದಿರುವ ಅಮಿತ್ ಶಾ, ಅನೀವು 70 ವರ್ಷದ ಆಡಳಿತದಲ್ಲಿ ಏನು ಮಾಡಿದ್ದೀರಿ ಎಂಬುದನ್ನು ಹೇಳಿ?. ನೀವು ಸರಿಯಾಗಿ ಕೆಲಸ ಮಾಡಿದ್ದರೆ, ಇಂದು ಶೌಚಾಲಯಗಳನ್ನು ಕಟ್ಟಿಸುವಂತಹ ಹಾಗೂ ಬಡ ತಾಯಂದಿರಿಗೆ ಸಿಲಿಂಡರ್ ಒದಗಿಸುವ ಅದೃಷ್ಟ ನಮ್ಮದಾಗುತ್ತಿರಲಿಲ್ಲ ಎಂದಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದ ಶಾ, ವಿಶ್ವದಾದ್ಯಂತ ಜನಪ್ರಿಯ ನಾಯಕರಾಗಿರುವ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಮತ್ತೊಮ್ಮೆ ವಿಶ್ವ ಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!