‘ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಹಿಂದೆ ಶಾ-ಮೋದಿ ಪಿತೂರಿ’

By Web DeskFirst Published Jul 8, 2019, 4:33 PM IST
Highlights

ಮೈತ್ರಿ ಸರ್ಕಾರ ಉರುಳಿಸುವ ಹಿಂದೆ ಅಮಿತ್ ಶಾ, ನರೇಂದ್ರ ಮೋದಿ ಕೈವಾಡ; ಬಿಜೆಪಿಯು ದೇಶಕ್ಕೆ ಕಳಂಕವಿದ್ದಂತೆ; ಶಾಸಕರನ್ನು ಹೆದರಿಸಲು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ: ಸಿದ್ದರಾಮಯ್ಯ ಕೆಂಡಾಮಂಡಲ 
 

ಬೆಂಗಳೂರು (ಜು.08): ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, ಬಿಜೆಪಿಯು ಸಂವಿಧಾನ-ವಿರೋಧಿ  ಮಾರ್ಗಗಳ ಮೂಲಕ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾತಂತ್ರದ ಬಗ್ಗೆ ಗೌರವ ಹೊಂದಿರದ ಬಿಜೆಪಿಯು ದೇಶಕ್ಕೆ ಕಳಂಕವಿದ್ದಂತೆ. ಜನಾದೇಶದೊಂದಿಗೆ ಸಾಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವನ್ನು ಉರಳಿಸಲು ಬಿಜೆಪಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

. is a disgrace to our country & they have no respect for Parliamentary democracy. RSS did not respect freedom movement & BJP is not respecting our constitution. They are pseudo nationalists with ulterior motive of destabilizing India's unity.

— Siddaramaiah (@siddaramaiah)

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನರೇಂದ್ರ ಮೋದಿಯನ್ನು ‘ಸರ್ವಾಧಿಕಾರಿ’ ಎಂದು ಕರೆದಿರುವ ಸಿದ್ದರಾಮಯ್ಯ,  ನಮ್ಮ ಶಾಸಕರನ್ನು ಹೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ, ಇವರೆಲ್ಲಾ ನಿಜವಾದ ದೇಶದ್ರೋಹಿಗಳೆಂದು ಕಿಡಿಕಾರಿದ್ದಾರೆ.

ಕಳೆದೊಂದು ವರ್ಷದಲ್ಲಿ ಮೈತ್ರಿ ಸರ್ಕಾರವನ್ನು ಉರಳಿಸುವ ಬಿಜೆಪಿಯ 6ನೇ ಪ್ರಯತ್ನವಿದು. ಅವರು ಇನ್ನೊಮ್ಮೆ ವಿಫಲರಾಗುವುದು ಖಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

had been trying to destabilize since last one year & this is their sixth attempt. They will surely fail again & will have to face the wrath of the public.

They are unable to digest the fact that our coalition govt is trying to ensure social justice & regional balance.

— Siddaramaiah (@siddaramaiah)
click me!