
ನವದೆಹಲಿ[ಜೂ.07]: ಗೃಹ ಸಚಿವ ಅಮಿತ್ ಶಾಗೆ ಕೇಂದ್ರ ದೆಹಲಿಯ ಕೃಷ್ಣ ಮೆನನ್ ಮಾರ್ಗದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನೇ ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
2004ರಲ್ಲಿ ಈ ಮನೆಗೆ ತೆರಳಿದ್ದ ಅಟಲ್‌ಜಿ ತಮ್ಮ ಕುಟುಂಬ ಸಮೇತ ಸುಮಾರು 14 ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು. ಆಗಸ್ಟ್‌ನಲ್ಲಿ ವಾಜಪೇಯಿ ನಿಧನದ ನಂತರ ಅವರ ಕುಟುಂಬ ನವೆಂಬರ್‌ನಲ್ಲಿ ಈ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿತ್ತು.
ಗೃಹ ಸಚಿವರಾದ ಮೇಲೆ ಶಾ ಈ ಸರ್ಕಾರಿ ಬಂಗಲೆಗೆ ಭೇಟಿ ನೀಡಿ ಅಗತ್ಯ ಬದಲಾವಣೆಗೆ ಸೂಚಿಸಿದ್ದು, ನವೀಕರಣ ಕಾರ್ಯ ಆಗಲೇ ಆರಂಭಗೊಂಡಿದೆ. 1-2 ತಿಂಗಳಲ್ಲಿ ನವೀಕರಣ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.