
ಬೆಂಗಳೂರು (ಜ.30): ಯಾವುದೇ ರಾಜ್ಯದ ಚುನಾವಣೆಗೆ ಮೊದಲು ಅಮಿತ್ ಶಾ ಮಾತನಾಡುವುದು ಅಪರೂಪ. ಆದರೆ ಕಳೆದ ವಾರ ಅಶೋಕಾ ರೋಡ್‌ನಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಕುಳಿತಿದ್ದ ಅಮಿತ್ ಶಾ ಹೊರಗಿದ್ದ ರಾಷ್ಟ್ರೀಯ ಟೀವಿ ರಿಪೋರ್ಟರ್'ಗಳನ್ನು ತಾನೇ ಸ್ವತಃ ಒಳಗೆ ಕರೆದು ಕರ್ನಾಟಕದ ಭೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ.
ಪಿಯೂಷ್ ಗೋಯಲ್ ಮತ್ತು ದೇವೇಗೌಡರ ನಡುವೆ ಕರ್ನಾಟಕದ ಪೊಲಿಟಿಕ್ಸ್ ವಿಷಯದಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಮಾತು ಆರಂಭಿಸಿದ ಶಾ, ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಬಿಜೆಪಿಗೆ ಯಾವುದೇ ನಷ್ಟ ಮಾಡುವುದಿಲ್ಲ, ಬದಲಾಗಿ ಕಾಂಗ್ರೆಸ್‌ನ ಅನೇಕ ಲಿಂಗಾಯತ ನಾಯಕರು ಸೋಲಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಈಗ ಬಿಜೆಪಿ 80 ಮತ್ತು 90 ರ ಆಸುಪಾಸಿನಲ್ಲಿ ಸ್ಥಾನ ಗಳಿಸುವ ಸ್ಥಿತಿಯಲ್ಲಿದೆ ಎಂಬುದನ್ನು ಇಲ್ಲ ಇಲ್ಲ ಎನ್ನುತ್ತಲೇ ಕಷ್ಟದಿಂದ ಒಪ್ಪಿಕೊಂಡ ಅಮಿತ್ ಶಾ, ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಗ್ರಾಫ್ ಮೇಲೆ ಹೋಗುತ್ತದೆ. ಮುಂದಿನ 2 ತಿಂಗಳು ಬೆಳೆಯುವುದು ನಾವೇ ಹೊರತು ಕಾಂಗ್ರೆಸ್ ಅಲ್ಲ. ಯಡಿಯೂರಪ್ಪ 75 ರ ವಯಸ್ಸಿನಲ್ಲಿ ಕೂಡ ಫಿಟ್ ಅಂಡ್ ಫೈನ್ ಆಗಿ ಪರಿವರ್ತನಾ ಯಾತ್ರೆ ಮಾಡಿದ್ದಾರೆ. ಅವರೇ ನಮ್ಮ ನ್ಯಾಚುರಲ್ ನಾಯಕ ಎಂದು ಹೇಳಿಬಿಟ್ಟಿದ್ದಾರೆ. ಸುಮಾರು 40 ನಿಮಿಷಗಳ ಕಾಲ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಯಾವ ಸಮೀಕರಣಗಳಿವೆ ಎಂದು ದಿಲ್ಲಿ ಪತ್ರಕರ್ತರಿಗೆ ವಿವರಿಸಿದ್ದಾರೆ ಅಮಿತ್ ಶಾ.
-ಪ್ರಶಾಂತ್ ನಾತು, ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ ಇಂಡಿಯಾ ಗೇಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.