ನೋ ಚಾನ್ಸ್, ಪೆಟ್ರೋಲ್ ಸುಂಕ ಕಡಿಮೆ ಮಾಡಲು ಸಾಧ್ಯವೇ ಇಲ್ಲ

By Web DeskFirst Published Sep 10, 2018, 6:09 PM IST
Highlights

ಪೆಟ್ರೋಲ್ ದರ ಏರಿಕೆ ವಿರೋಧಿಸಿ ಬಂದ್ ಗೆ ಕರೆ ನೀಡಿದ್ದ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೆಟ್ರೋಲ್ ಬೆಲೆ ಏರಿಕೆ, ಇಳಿಕೆ ಕೇಂದ್ರದ ಕೈನಲ್ಲಿ ಇಲ್ಲ. ತೈಲ ಕಂಪನಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ.- ರವಿ ಶಂಕರ್ ಪ್ರಸಾದ್ 

ನವದೆಹಲಿ[ಸೆ.10]: ಯಾವುದೇ ಕಾರಣಕ್ಕೂ ಪೆಟ್ರೋಲ್ ಮೇಲಿನ ಸುಂಕವನ್ನು ಕಡಿಮೆ ಮಾಡಲು ಸಾಧ್ಯವೇ ಇಲ್ಲ  ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ದರ ಏರಿಕೆ ವಿರೋಧಿಸಿ ಬಂದ್ ಗೆ ಕರೆ ನೀಡಿದ್ದ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೆಟ್ರೋಲ್ ಬೆಲೆ ಏರಿಕೆ, ಇಳಿಕೆ ಕೇಂದ್ರದ ಕೈನಲ್ಲಿ ಇಲ್ಲ. ತೈಲ ಕಂಪನಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈಗಾಗಲೇ ಈ ಬಗ್ಗೆ ಕೇಂದ್ರ  ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ತೈಲ ಉತ್ಫಾದನಾ ರಾಷ್ಟ್ರಗಳ ಮೇಲೆ ಭಾರತ ಸರ್ಕಾರದ ಹಿಡಿತ ಇರುವುದಿಲ್ಲ. ಕಾಂಗ್ರೆಸ್ ನಿಂದ ಭಾರತ ಬಂದ್ ನಡೆಸುತ್ತಿರುವ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬಿಹಾರದಲ್ಲಿ ಪ್ರತಿಭಟನೆ ವೇಳೆ ಆ್ಯಂಬುಲೆನ್ಸ್ ನಲ್ಲಿದ್ದ ಮಗು ಸಾವನ್ನಪ್ಪದ್ದಕ್ಕೆ ತೀವ್ರವಾಗಿ ಖಂಡಿಸಿದರು. ದೇಶದಲ್ಲಿ ಹಿಂಸಾ ತಾಂಡವ ಹಾಗೂ ಸಾವಿನ ಆಟ ಬಂದ್ ಆಗಬೇಕು. ಜನರಲ್ಲಿ ನೋವು ಇರಬಹುದು ಆದರೆ ಈ ಬಂದ್ ಗೆ ಬೆಂಬಲ ನೀಡಿಲ್ಲ. ಜನರ ತೊಂದರೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಜನರ ಜತೆ ಇದೆ ಎಂದು ತಿಳಿಸಿದರು.

 

click me!