
ವಾಷಿಂಗ್ಟನ್: ಅಮೆರಿಕ ರಚಿಸಿರುವ ಉಗ್ರರ ‘ಸುರಕ್ಷಿತ ಸ್ವರ್ಗ’ ತಾಣಗಳಾಗಿರುವ ದೇಶ ಮತ್ತು ವಲಯಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರ್ಪಡೆಯಾಗಿದೆ. 2016ರಲ್ಲಿ ಲಷ್ಕರೆ ತೊಯ್ಬಾ ಮತ್ತು ಜೆಇಎಂನಂತಹ ಉಗ್ರ ಸಂಘಟನೆಗಳು ಪಾಕ್'ನಲ್ಲಿ ತರಬೇತಿ, ನಿಧಿ ಕ್ರೋಢೀಕರಣ, ಸಂಘಟನೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದವು ಎಂಬ ಆಪಾದನೆಗಳೊಂದಿಗೆ, ಆ ದೇಶವನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಅಮೆರಿಕ ಸಂಸತ್ತಿನಿಂದ ಅನುಮತಿ ಪಡೆದಿರುವ ‘ಭಯೋತ್ಪಾದನೆ ಕುರಿತ ದೇಶದ ವರದಿ’ ಎಂಬ ವಾರ್ಷಿಕ ವರದಿಯಲ್ಲಿ, ಈ ವಿಷಯ ತಿಳಿಸಲಾಗಿದೆ. ತಹ್ರಿಕೆ ತಾಲಿಬಾನ್ ಪಾಕಿಸ್ತಾನ್‌ನಂತಹ ಸಂಘಟನೆಗಳು ಪಾಕಿಸ್ತಾನದಲ್ಲಿ ನಡೆಸಿದ್ದ ದಾಳಿಗಳಿಗೆ ಸಂಬಂಧಿಸಿ, ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಆದರೆ ಅಫ್ಘಾನಿಸ್ತಾನ ತಾಲಿಬಾನ್ ಅಥವಾ ಹಕ್ಕಾನಿ ಅಥವಾ ಅಫ್ಘಾನಿಸ್ತಾನದಲ್ಲಿನ ಅಮೆರಿಕದ ಹಿತಾಸಕ್ತಿಗಳಿಗೆ ಅಡ್ಡಿಪಡಿಸುವ ಅವುಗಳ ಸಾಮರ್ಥ್ಯವನ್ನು ಮಿತಿಗೊಳಿಸುವ ವಿರುದ್ಧ ಪಾಕಿಸ್ತಾನ ಪ್ರಮುಖ ಕ್ರಮ ಕೈಗೊಂಡಿಲ್ಲ. ಆದರೂ ಅಫ್ಘಾನ್ ನೇತೃತ್ವದ ಶಾಂತಿ ಪ್ರಕ್ರಿಯೆಗಳ ಪ್ರಯತ್ನಗಳನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದ ಮೇಲೆ ಮಾವೊವಾದಿ ಬಂಡಾಯಕೋರರು ಸೇರಿದಂತೆ, ಪಾಕಿಸ್ತಾನ ಮೂಲದ ಭಯೋತ್ಪಾದಕರ ದಾಳಿ ಮುಂದುವರಿದಿದೆ. ಜಮ್ಮು-ಕಾಶ್ಮೀರದಲ್ಲಿ ಗಡಿಯಾಚೆಗಿನ ದಾಳಿಗಳಿಗೆ ಭಾರತ ಪಾಕಿಸ್ತಾನವನ್ನು ದೂರುವುದೂ ಮುಂದುವರಿದಿದೆ ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ.
ಜನವರಿಯಲ್ಲಿ ಪಂಜಾಬ್'ನ ಪಠಾಣ್'ಕೋಟ್‌ನಲ್ಲಿ ಉಗ್ರರ ದಾಳಿಯನ್ನು ಭಾರತ ಎದುರಿಸಿದೆ. ಜೆಇಎಂ ಉಗ್ರರು ದಾಳಿಗೆ ಕಾರಣ ಎಂದು ಭಾರತೀಯ ಆಡಳಿತ ಆಪಾದಿಸಿದೆ. 2016ರಲ್ಲಿ, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಸಹಭಾಗಿತ್ವವನ್ನು ತೀವ್ರಗೊಳಿಸುವ ಮತ್ತು ಅಮೆರಿಕದೊಂದಿಗೆ ಮಾಹಿತಿ ಹಂಚಿಕೊಳ್ಳುವ ಆಸಕ್ತಿ ಭಾರತ ತೋರಿದೆ ಎಂದು ಅದು ತಿಳಿಸಿದೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.