
ಮಹಿಳೆಯರ ಶಾಪಿಂಗ್ ಸಾಹಸದ ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಿಲ್ಲ. ಆದರೆ ಇಂಥ ಶಾಪಿಂಗ್ ಸಾಹಸ ಇದೀಗ ಮಾರಿಷಸ್‌ನ ಅಧ್ಯಕ್ಷರ ಪಟ್ಟಕ್ಕೇ ಭಂಗ ತಂದಿದೆ. ಹೌದು. ಸರ್ಕಾರೇತರ ಸಂಸ್ಥೆಯೊಂದು ನೀಡಿದ್ದ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಭಾರೀ ಮೌಲ್ಯದ ಬಟ್ಟೆ, ಆಭರಣ ಖರೀದಿಸಿದ ಆರೋಪವೊಂದು ಇದೀಗ ಮಾರಿಷಸ್‌ನ ಮೊದಲ ಮಹಿಳಾ ಅಧ್ಯಕ್ಷೆ ಅಮಿನಾಹ್ ಗುರೀಬ್ ಅವರಿಗೆ ಅಂಟಿಕೊಂಡಿದೆ.
ಹೀಗಾಗಿ ಅವರಿಗೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದ್ದು, ಅವರು ಶೀಘ್ರವೇ ತಮ್ಮ ಸ್ಥಾನಕ್ಕೆ ಗುಡ್‌ಬೈ ಹೇಳಲಿದ್ದಾರೆ ಎನ್ನಲಾಗಿದೆ. ಶಿಕ್ಷಣಕ್ಕೆ ನೆರವಾಗುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ತನ್ನ ಸಂಘಟನೆಯ ಗೌರವ ಸದಸ್ಯರಾಗಿದ್ದ ಅಮಿನಾಹ್‌ಗೆ ಕ್ರೆಡಿಟ್ ಕಾರ್ಡ್ ನೀಡಿತ್ತು. ಅವರು ಇದನ್ನು ಕಾನೂನು ಬಾಹಿರವಾಗಿ ವಿದೇಶಗಳಲ್ಲಿ ಸ್ವಂತ ವಸ್ತುಗಳ ಖರೀದಿಗೆ ಬಳಸಿಕೊಂಡಿದ್ದಾರೆ. ಇದು ಭಾರೀ ವಿವಾಹದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಮಿನಾಹ್‌ಗೆ ರಾಜೀನಾಮೆಗೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.