
ಬೆಂಗಳೂರು(ಜು.07) : ರೆಬಲ್ ಸ್ಟಾರ್ ಅಂಬರೀಶ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಖಡಕ್ ಮಾತುಗಾರರು.
ತನ್ನ ನೇರನುಡಿಯ ಮಾತಿನ ಶೈಲಿಯಲ್ಲಿಯೇ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೇ ಅಂಬಿ ತಾವು ಯಾವುತ್ತು ಸಾವಿನ ಮನೆಗಳಿಗೆ ಹೋಗುವುದಿಲ್ಲ. ತೀರ ಅನಿವಾರ್ಯದ ಕಾರಣಗಳಿದ್ದರೆ ಮಾತ್ರ ಹೋಗುತ್ತೇನೆ ಎನ್ನುತ್ತಾರೆ.
ಕಾರಣ ಕೇಳಿದರೆ ತಮಗಾದ ಹಿಂದಿನ ಘಟನೆಗಳನ್ನು ಬಿಚ್ಚಿಟ್ಟರು. ತಾವು ಅಂತಿಮ ದರ್ಶನಕ್ಕೆ ಹೋದಾಗ ಅಭಿಮಾನಿಗಳು ಸಾವಿನ ಮನೆಯಲ್ಲೂ ಸಂಭ್ರಮಿಸುತ್ತಾರೆ. ಹಲವು ಬಾರಿ ಈ ರೀತಿಯ ಅನುಭವಗಳಾಗಿವೆ. ಸಾವಿನ ಮನೆಯ ದುಃಖವನ್ನು ಮರೆತು ಜಯಘೋಷ ಹಾಕುತ್ತಾರೆ. ಇದು ತಮಗೆ ಇರುಸು ಮುರುಸು ಉಂಟುಮಾಡುತ್ತದೆ.ದುಃಖದಲ್ಲಿರುವ ಕುಟುಂಬದಲ್ಲಿ ಸನ್ಮಾನ ಸತ್ಕಾರ ನಡೆದರೆ ಅವಮಾನ ಆದಂತಲ್ಲವೆ. ಇದರಿಂದ ತಾವು ಸಾವಿನ ಮನೆಗಳಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯದಿಂದ ಸಂಪೂರ್ಣವಾಗಿ ಬಿಡುವು ಪಡೆದುಕೊಂಡಿರುವ ಅಂಬರೀಶ್ ಸಿನಿಮಾಗಳತ್ತಾ ಮತ್ತೆ ಮುಖ ಮಾಡಿದ್ದು ಸದ್ಯ ಸುದೀಪ್ ನಿರ್ಮಾಣದ ಅಂಬಿ ನಿನಗೆ ವಯಸ್ಸಾಯ್ತೋ, ಮುನಿರತ್ನರ ಕುರುಕ್ಷೇತ್ರ ಹಾಗೂ ರಾಜಸಿಂಹ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.