ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

Published : Nov 26, 2018, 08:07 AM IST
ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಸಾರಾಂಶ

ಅತ್ತ ಅಂಬರೀಶ್ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದ್ದರೆ, ಜೆ.ಪಿ.ನಗರದ ನಿವಾಸದಲ್ಲಿ ಕನ್ವರ್‌ ತೀವ್ರ ಮೌನಕ್ಕೆ ಶರಣಾಗಿತ್ತು. ಸದಾ ಚಟುವಟಿಕೆಯಿಂದ ಇರುತ್ತಿದ್ದ ಕನ್ವರ್‌, ಭಾನುವಾರ ಮಾತ್ರ ಅತೀವ ಬೇಸರದಲ್ಲಿ ಮುಳುಗಿತ್ತು. ಕಾರಣ ನಿತ್ಯ ಕಾಣುತ್ತಿದ್ದ ತನ್ನ ಮಾಲೀಕನನ್ನು ಭಾನುವಾರ ಕಾಣಲಿಲ್ಲ.   

ಬೆಂಗಳೂರು[ನ.26]: ಕರುನಾಡಿನ ‘ಕನ್ವರ್‌ಲಾಲ್‌’ ಕಾಲವಾದರೆಂದು ಮೌನಕ್ಕೆ ಶರಣಾಯಿತು ಕನ್ವರ್‌. 

ಹೌದು! ಕರುನಾಡಿನ ಕನ್ವರ್‌ಲಾಲ್‌ ನಟ ಅಂಬರೀಶ್ ಆದರೆ ಅವರ ಸಾಕು ನಾಯಿಯೇ ಈ ಕನ್ವರ್‌. ಭಾನುವಾರ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದ್ದರೆ, ಜೆ.ಪಿ.ನಗರದ ನಿವಾಸದಲ್ಲಿ ಕನ್ವರ್‌ ತೀವ್ರ ಮೌನಕ್ಕೆ ಶರಣಾಗಿತ್ತು.

ಸದಾ ಚಟುವಟಿಕೆಯಿಂದ ಇರುತ್ತಿದ್ದ ಕನ್ವರ್‌, ಭಾನುವಾರ ಮಾತ್ರ ಅತೀವ ಬೇಸರದಲ್ಲಿ ಮುಳಗಿತ್ತು. ಕಾರಣ ನಿತ್ಯ ಕಾಣುತ್ತಿದ್ದ ತನ್ನ ಮಾಲೀಕನನ್ನು ಭಾನುವಾರ ಕಾಣಲಿಲ್ಲ. ಇದರಿಂದ ಮರುಕಪಡುತ್ತಾ ಒಂದೇ ಸ್ಥಳದಲ್ಲಿ ಮಲಗಿಕೊಂಡಿತ್ತು. ಮನೆಗೆ ಭೇಟಿ ನೀಡಿದವರು ಮಾತನಾಡಿಸಿದರೂ ಪ್ರತಿಕ್ರಿಯಿಸಲಿಲ್ಲ ಸುಮ್ಮನಿತ್ತು.

ಕನ್ವರ್‌ ಮೇಲೆ ಬಲು ಪ್ರೀತಿ:

ಈ ಕನ್ವರ್‌ಗೆ 12 ವರ್ಷ. ಅಂಬರೀಶ್ ಅವರು ಆ ನಾಯಿಯ ಬಗ್ಗೆ ತುಂಬಾ ಪ್ರೀತಿ ಹೊಂದಿದ್ದರು. ಅದಕ್ಕಾಗಿಯೇ ತಾವು ನಟಿಸಿದ ‘ಅಂತ’ದಲ್ಲಿ ಕನ್ವರ್‌ ಲಾಲ್‌ ಪಾತ್ರದ ಹೆಸರನ್ನೇ ಈ ನಾಯಿಗೆ ಇಟ್ಟಿದ್ದರು.

ಈ ಮಧ್ಯೆ 2015ರಲ್ಲಿ ಮೇ 29ರಂದು ನಡೆದಿದ್ದ 63ನೇ ಹುಟ್ಟಹುಬ್ಬಕ್ಕೆ ಸುಮಲತಾ ಅವರು ಎರಡು ಹೆಣ್ಣು ನಾಯಿಗಳನ್ನು ಅಂಬರೀಷ್‌ ಅವರಿಗೆ ಉಡುಗೊರೆ ನೀಡಿದ್ದರು.

ಈ ಕನ್ವರ್‌ ಹಂಟರ್‌ ಡಾಗ್‌ ಎಂದು ಮನೆಗೆ ಬಂದ ಮಂದಿಗೆ ಅಂಬರೀಶ್ ಪರಿಚಯಿಸುತ್ತಿದ್ದರು. ಯಾರಾದರೂ ಅಂಬರೀಶ್ ಅವರ ಮೈ ಮುಟ್ಟಿದರೆ, ಅಂತಹವರ ಮೇಲೆ ಕನ್ವರ್‌ ಬೊಗಳುತ್ತಾ ಕಚ್ಚಲು ಧಾವಿಸುತ್ತಿತ್ತು ಎಂದು ಅಂಬರೀಶ್ ಮನೆಗೆ ಭೇಟಿ ನೀಡಿದ್ದವರು ಅನೇಕರು ಹೇಳುತ್ತಾರೆ.

ಅಂಬರೀಶ್ ಅವರ ಅನೇಕ ಫೋಟೋ ಹಾಗೂ ವಿಡಿಯೋಗಳಲ್ಲಿ ಈ ಕನ್ವರ್‌ ಕಾಣಿಸಿಕೊಂಡಿದೆ. ಆದರೆ, ಭಾನುವಾರ ಮಾತ್ರ ಕನ್ವರ್‌ ಪಾಲಿಗೆ ಅತ್ಯಂತ ದುಃಖದ ದಿನ. ಅದರ ಕನ್ವರ್‌ ಮುಖದಲ್ಲಿ ದುಃಖ ಎದ್ದು ಕಾಣುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನದಿ ಸಮೀಪ ಡೆತ್ನೋಟ್ ಬರೆದಿಟ್ಟು ರೇ*ಪ್ ಆರೋಪಿ ಎಸ್ಕೇಪ್: ಆತನಿಗಾಗಿ ನದಿಯಲ್ಲಿ 3 ದಿನ ಹುಡುಕಿದ ಪೊಲೀಸರು
ಒಪ್ಪೊ ಫೈಂಡ್ X9 ಸೀರಿಸ್, ಪ್ರೋ ಲೆವಲ್ ಕ್ಯಾಮೆರಾ,AI ಟೂಲ್ಸ್ ಜೊತೆ ಸುದೀರ್ಘ ಸಮಯದ ಬ್ಯಾಟರಿ ಸ್ಮಾರ್ಟ್‌ಫೋನ್