
ನವದೆಹಲಿ[ಆ.04]: ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಇರುವುದರಿಂದ, ಯಾತ್ರೆ ಮೊಟಕುಗೊಳಿಸಿ ಆದಷ್ಟುಬೇಗ ಕಾಶ್ಮೀರ ತ್ಯಜಿಸಿ ಎಂದು ಜಮ್ಮು ಕಾಶ್ಮೀರ ಸರ್ಕಾರ ಆದೇಶಿಸಿರುವದರಿಂದ ಯಾತ್ರಿಕರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರದ ಆದೇಶದಿಂದ ಸ್ವಂತ ಊರಿಗೆ ಹಿಂದಿರಿಗಲು ಜನ ಏಕಾಏಕಿ ಏರ್ಪೋರ್ಟ್ಗೆ ಧಾವಿಸಿದ್ದು, ಶ್ರೀನಗರ ಏರ್ಪೋರ್ಟ್ನಲ್ಲಿ ಟಿಕೆಟ್‌ಗಾಗಿ ಎರಡರಿಂದ ಮೂರು ದಿನ ಪರದಾಡುವಂತಾಗಿದೆ.
ಇದರ ಜತೆ ವಿಮಾನ ಟಿಕೆಟ್ಗಳ ದರವೂ ಗಗನಕ್ಕೇರಿದ್ದು, ಸಾಧಾರಣವಾಗಿ ಶ್ರೀನಗರದಿಂದ ದೆಹಲಿಗೆ 3000 ರು. ಇದ್ದ ಟಿಕೆಟ್ ದರ 10,000 ದಿಂದ 22,000 ಕ್ಕೆ ಏರಿಕೆಯಾಗಿದೆ. ಶ್ರೀನಗರದಿಂದ ಜಮ್ಮುವಿಗೆ ವಿಮಾನಯಾನ ಸಂಸ್ಥೆಗಳು 16000 ರು. ವಿಧಿಸುತ್ತಿದ್ದರೆ, ಶ್ರೀನಗರದಿಂದ ಅಮೃತ್ಸರ್, ಜೈಪುರ ಹಾಗೂ ಚಂಢೀಗಡಕ್ಕೆ ಟಿಕೆಟ್ ದರ 10000 ರು. ದಿಂದ 19,000 ರು. ವರೆಗೆ ಏರಿಕೆಯಾಗಿದೆ.
ಇದು ಯಾತ್ರಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲ ವಿಮಾನಯಾನ ಸಂಸ್ಥೆಗಳು ಟಿಕೆಟ್ ರದ್ದು ಹಾಗೂ ಪ್ರಯಾಣ ಮುಂದೂಡಿಕೆ ಶುಲ್ಕವನ್ನು ರದ್ದುಗೊಳಿಸಿ ಯಾತ್ರಿಗಳಿಗೆ ರಿಲೀಫ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.