ಕಾಂಗ್ರೆಸ್ ತೊರೆದ ಇಬ್ಬರು ನಾಯಕರು ಬಿಜೆಪಿಗೆ

Published : Jul 16, 2019, 02:22 PM IST
ಕಾಂಗ್ರೆಸ್ ತೊರೆದ ಇಬ್ಬರು ನಾಯಕರು ಬಿಜೆಪಿಗೆ

ಸಾರಾಂಶ

ಕಾಂಗ್ರೆಸ್ ತೊರೆದ ಇಬ್ಬರು ನಾಯಕರು ಇದೀಗ ಬಿಜೆಪಿ ಸೆರ್ಪಡೆಗೆ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಿಸಿದ್ದಾರೆ. 

ಅಹಮದಾಬಾದ್ [ಜು.16] : ಮಾಜಿ ಕಾಂಗ್ರೆಸ್ ಶಾಸಕ ಅಲ್ಪೇಶ್ ಟಾಕೂರ್ ಹಾಗೂ ದವಳ್ ಸಿನ್ಹ್ ಜಾಲಾ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಟಾಕೂರ್ ಸೇನಾ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ಜಾಲಾ ತಮ್ಮ ನಿರ್ಧಾರ ತಿಳಿಸಿದ್ದಾರೆ. 

ಜುಲೈ 5 ರಂದು ಗುಜರಾತ್  ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ಮಾಡಿದ್ದ ಅಲ್ಪೇಶ್ ಟಾಕೂರ್ , ಜಾಲಾ ಇಬ್ಬರೂ ಕೂಡ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. 

ಇದೀಗ ಅಹಮದಾಬಾದ್ ನಲ್ಲಿ ಹಲವು ಮುಖಂಡರೊಂಡಿಗೆ ನಡೆಸಿದ ಸಭೆ ಬಳಿಕ ತಾವೂ ಬಿಜೆಪಿ ಸೇರಲು ನಿರ್ಧರಿಸಿದ್ದಾಗಿ ದವಳ್ ಸಿನ್ಹ್ ಜಾಲಾ ಘೋಷಿಸಿದ್ದಾರೆ. 

ಪಟೇಲ್ ಸಮುದಾಯದ ಮೀಸಲಾತಿಗಾಗಿ ಅಲ್ಪೇಶ್ ಟಾಕೂರ್ 2015ರಲ್ಲಿ ತಮ್ಮ ಹೋರಾಟ ಆರಂಭ ಮಾಡಿದ್ದು, ಅದಾದ ಬಳಿ  ರಧಾನ್ ಪುರ್ ಕ್ಷೇತ್ರದಿಂದ 2017ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

ಆದರೆ 2019 ಲೋಕಸಭಾ ಚುನಾವಣೆಗೆ ಕೆಲ ಸಮಯ ಇರುವಂತೆಯೇ ಕಾಂಗ್ರೆಸ್ ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಇದೀಗ ಶಿಘ್ರ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌