ಪಾಕಿಸ್ತಾನದಲ್ಲಿ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್'ಗೆ ಮರಣದಂಡನೆ ಶಿಕ್ಷೆ

Published : Apr 10, 2017, 10:29 AM ISTUpdated : Apr 11, 2018, 12:51 PM IST
ಪಾಕಿಸ್ತಾನದಲ್ಲಿ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್'ಗೆ ಮರಣದಂಡನೆ ಶಿಕ್ಷೆ

ಸಾರಾಂಶ

ಪಾಕಿಸ್ತಾನದ ಇಂಟರ್'ಸರ್ವಿಸ್ ಪಬ್ಲಿಕ್ ರಿಲೇಶನ್ಸ್ ಇಲಾಖೆ ಇಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕುಲಭೂಷಣ್ ಜಾಧವ್'ರನ್ನು ಭಾರತೀಯ RAW ಏಜೆಂಟ್ ಎಂದು ನೇರವಾಗಿ ಸಂಬೋಧಿಸಿದೆ. ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ಎಸಗಲು RAW ತನಗೆ ಕೆಲಸ ವಹಿಸಿತ್ತೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಕುಲಭೂಷಣ್ ಒಪ್ಪಿಕೊಂಡು ಹೇಳಿದ್ದರೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ನವದೆಹಲಿ(ಏ. 10): ವರ್ಷದ ಹಿಂದೆ ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಿದ್ದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಮರಣದಂಡನೆ ವಿಧಿಸಿದೆ. ಕರಾಚಿ, ಬಲೂಚಿಸ್ತಾನದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಕುಲಭೂಷಣ್ ಅವರಿಗೆ ಎಫ್'ಜಿಸಿಎಂ ಕೋರ್ಟ್ ಈ ಶಿಕ್ಷೆ ನೀಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಕೂಡ ಮಾಧ್ಯಮಗಳಿಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಪಾಕಿಸ್ತಾನ ಹೇಳುವ ಪ್ರಕಾರ, ಕುಲಭೂಷಣ್ ಯಾದವ್ ಅವರು 'ರಾ' ಏಜೆಂಟ್ ಆಗಿದ್ದಾರೆ. ಕುಲಭೂಷಣ್ ತಾನು ಇನ್ನೂ ಭಾರತೀಯ ನೌಕಾ ಪಡೆಯ ಸೇವೆಯಲ್ಲಿದ್ದೇನೆಂದು ಹೇಳುವ ವಿಡಿಯೋವೊಂದನ್ನು ಕಳೆದ ವರ್ಷ ಪಾಕ್ ಸೇನೆ ಬಿಡುಗಡೆ ಮಾಡಿತ್ತು. ಆದರೆ, ಕುಲಭೂಷಣ್ ನಿವೃತ್ತ ನೌಕಾ ಪಡೆ ಅಧಿಕಾರಿಯಾಗಿದ್ದು, ಭಾರತ ಸರಕಾರಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಭಾರತ ಸರಕಾರ ಸ್ಪಷ್ಟಪಡಿಸಿದೆ. ಕಳೆದ ವರ್ಷದಂದು ಇರಾನ್ ದೇಶದ ಮೂಲಕ ಬಲೂಚಿಸ್ತಾನಕ್ಕೆ ಬಂದಿದ್ದ ಕುಲಭೂಷಣ್ ಜಾಧವ್'ರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದರು. ಆದರೆ, ಬಂಧನದ ಸ್ಥಳದ ವಿಚಾರದಲ್ಲಿ ಭಾರತ ಭಿನ್ನಾಭಿಪ್ರಾಯ ಹೊಂದಿದ್ದು, ಇರಾನ್'ನಲ್ಲಿ ಕುಲಭೂಷಣ್'ರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿತ್ತೆಂದು ವಾದಿಸಿದೆ.

ಐಎಸ್'ಪಿಆರ್'ನ ಪ್ರಕಟಣೆ ಏನು ಹೇಳುತ್ತೆ?
ಪಾಕಿಸ್ತಾನದ ಇಂಟರ್'ಸರ್ವಿಸ್ ಪಬ್ಲಿಕ್ ರಿಲೇಶನ್ಸ್ ಇಲಾಖೆ ಇಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಕುಲಭೂಷಣ್ ಜಾಧವ್'ರನ್ನು ಭಾರತೀಯ RAW ಏಜೆಂಟ್ ಎಂದು ನೇರವಾಗಿ ಸಂಬೋಧಿಸಿದೆ. ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ಎಸಗಲು RAW ತನಗೆ ಕೆಲಸ ವಹಿಸಿತ್ತೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಕುಲಭೂಷಣ್ ಒಪ್ಪಿಕೊಂಡು ಹೇಳಿದ್ದರೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

"ಕುಲಭೂಷಣ್ ಸುಧೀರ್ ಜಾಧವ್ ಅಲಿಯಾಸ್ ಹುಸೇನ್ ಮುಬಾರಕ್ ಪಟೇಲ್ ಅವರನ್ನು 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಾಶ್ಕೆಲ್'ನಲ್ಲಿ ಬಂಧಿಸಲಾಯಿತು... ಎಲ್ಲಾ ಆರೋಪಗಳಲ್ಲೂ ಕುಲಭೂಷಣ್ ತಪ್ಪಿತಸ್ಥರೆಂಬುದು ಸಾಬೀತಾಗಿದೆ..." ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಪ್ರಕರಣ: ಶಿವಮೊಗ್ಗ ಜೈಲಿನಿಂದ ಇಂದು 'ಬುರುಡೆ ಚಿನ್ನಯ್ಯ' ಬಿಡುಗಡೆ, ಶ್ಯೂರಿಟಿ ಕೊಟ್ಟಿದ್ದು ಯಾರು?
India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?