
ಅಹ್ಮದಾಬಾದ್: ಹಿಂದೂ ಧರ್ಮದಲ್ಲಿದ್ದ ಸಾಮಾಜಿಕ ಪಿಡುಗುಗಳಾದ ಸತಿ ಸಹಗಮನ ಪದ್ಧತಿ, ವರದಕ್ಷಿಣೆ, ಬಾಲ್ಯ ವಿವಾಹಗಳನ್ನು ರದ್ದು ಮಾಡಿದ ರೀತಿಯಲ್ಲೇ, ಮುಸ್ಲಿಮರು ವಿಚ್ಛೇದನ ವ್ಯವಸ್ಥೆಯಾದ ತ್ರಿವಳಿ ತಲಾಖ್ ರದ್ದು ಮಾಡಲು ಮುಂದಾಗಬೇಕು ಎಂದು ಕೇಂದ್ರ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ. ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು.
ಉಪರಾಷ್ಟ್ರಪತಿ ಪತ್ನಿ ವಿರೋಧ: 3 ಬಾರಿ ತಲಾಖ್ ಹೇಳಿದರೆ ಅದು ತಲಾಖ್ ಎನ್ನಿಸಿಕೊಳ್ಳದು. ಮೌಲ್ವಿಗಳ ಮಾತು ಕೇಳದೇ ಮುಸ್ಲಿಂ ಮಹಿಳೆಯರು ಕುರಾನ್‌ನಲ್ಲಿ ಏನಿದೆ ಎಂಬುದನ್ನು ಓದಿ ತಿಳಿದುಕೊಳ್ಳಬೇಕು ಎಂದು ಉಪರಾಷ್ಟ್ರಪತಿಗಳ ಪತ್ನಿ ಸಲ್ಮಾ ಅನ್ಸಾರಿ ದಿಲ್ಲಿಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.