ಪೆಟ್ರೋಲ್‌ 4 ವರ್ಷದ ಗರಿಷ್ಠಕ್ಕೆ ಡೀಸೆಲ್‌ ಸಾರ್ವಕಾಲಿಕ ಗಗನಕ್ಕೆ!

By Suvarna Web DeskFirst Published Apr 2, 2018, 7:05 AM IST
Highlights

ತೈಲೋತ್ಪನ್ನಗಳ ದರ ವಿನಿಯಂತ್ರಣದ ಬಳಿಕ ದಿನೇ ದಿನೇ ಗ್ರಾಹಕರ ಜೇಬನ್ನು ಸುಡುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಇದೀಗ ಐತಿಹಾಸಿಕ ಮಟ್ಟತಲುಪಿವೆ. ಭಾನುವಾರ ಪೆಟ್ರೋಲ್‌ ದರ ಲೀ.ಗೆ 19 ಪೈಸೆ ಮತ್ತು ಡೀಸೆಲ್‌ ದರ ಲೀ.ಗೆ 18 ಪೈಸೆ ಏರಿಕೆಯಾಗಿದೆ.

ನವದೆಹಲಿ: ತೈಲೋತ್ಪನ್ನಗಳ ದರ ವಿನಿಯಂತ್ರಣದ ಬಳಿಕ ದಿನೇ ದಿನೇ ಗ್ರಾಹಕರ ಜೇಬನ್ನು ಸುಡುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಇದೀಗ ಐತಿಹಾಸಿಕ ಮಟ್ಟತಲುಪಿವೆ. ಭಾನುವಾರ ಪೆಟ್ರೋಲ್‌ ದರ ಲೀ.ಗೆ 19 ಪೈಸೆ ಮತ್ತು ಡೀಸೆಲ್‌ ದರ ಲೀ.ಗೆ 18 ಪೈಸೆ ಏರಿಕೆಯಾಗಿದೆ.

ಈ ಮೂಲಕ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 74.90 ಮತ್ತು ಡೀಸೆಲ್‌ ದರ ಲೀ.ಗೆ 65.67 ರು.ಗೆ ತಲುಪಿದೆ. ಡೀಸೆಲ್‌ನ ಈ ದರ ಸಾರ್ವಕಾಲಿಕ ಗರಿಷ್ಠವಾಗಿದ್ದರೆ, ಪೆಟ್ರೋಲ್‌ ದರ 4 ವರ್ಷಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. 2013ರಲ್ಲಿ ಪೆಟ್ರೋಲ್‌ ಬೆಲೆ 83 ರು. ತಲುಪಿತ್ತು. ಇದು ಸಾರ್ವಕಾಲಿಕ ಗರಿಷ್ಠ ಪ್ರಮಾಣವಾಗಿದೆ.

click me!