
ಬೀಜಿಂಗ್: ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವ ಚೀನಾ ಟಿಯಾನ್‌ಗಾಂಗ್-1 ಬಾಹ್ಯಾಕಾಶ ಕೇಂದ್ರ ಸೋಮವಾರ ಧರೆಗೆ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆಸ್ಪ್ರೇಲಿಯಾದಿಂದ ಅಮೆರಿಕದವರೆಗಿನ ಯಾವುದೇ ಪ್ರದೇಶದಲ್ಲಿ ಈ ಬಾಹ್ಯಾಕಾಶ ಕೇಂದ್ರ ಧರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಅಪ್ಪಳಿಸುವ ಸಮಯವನ್ನು ಈಗಲೇ ಖಚಿತಪಡಿಸಲಾಗದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಮೊದಲು ಭಾನುವಾರ ಬೆಳಗ್ಗೆ ಈ ಕೇಂದ್ರ ಭೂಮಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಚೀನಾದ ಕಾಲಮಾನ ಭಾನುವಾರ ಮಧ್ಯಾಹ್ನದ ವೇಳೆಗೆ ಅದಿನ್ನೂ ಭೂಮಿಯ ಕಕ್ಷೆಯಿಂದ 179 ಕಿ.ಮೀ ದೂರದಲ್ಲಿರುವುದು ಪತ್ತೆಯಾಗಿದೆ. ಹೀಗಾಗಿ 8 ಟನ್ ತೂಕದ ಕೇಂದ್ರ ಸೋಮವಾರ ಧರೆಗೆ ಅಪ್ಪಳಿಸಲಿದೆ. ಆದರೆ ಭೂಮಿಯ ಕಕ್ಷೆಯನ್ನು ಪ್ರವೇಶಿಸುವ ವೇಳೆ ಭಾರೀ ಘರ್ಷಣೆ ಮತ್ತು ತಾಪಮಾನದಿಂದಾಗಿ ಅದು ಸುಟ್ಟು ಬೂದಿಯಾಗಲಿದೆ. ಹೀಗಾಗಿ ಹೆಚ್ಚಿನ ಅಪಾಯವೇನೂ ಆಗದು. ಆದರೆ ಅದರಲ್ಲಿನ ಕೆಲ ವಿಷಕಾರಿ ವಸ್ತುಗಳು ಜನವಸತಿ ಪ್ರದೇಶದ ಮೇಲೆ ಬಿದ್ದರೆ ಅಪಾಯದ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಕಾಯಂ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ 2011ರಲ್ಲಿ ಚೀನಾ ಪ್ರಾಯೋಗಿಕವಾಗಿ ಈ ಕೇಂದ್ರವನ್ನು ಹಾರಿಬಿಟ್ಟಿತ್ತು. 2013ರಲ್ಲೇ ಇದರ ಅವಧಿ ಮುಗಿದಿತ್ತು. ಆದರೆ ಇತ್ತೀಚಿನವರೆಗೂ ಅದು ತನ್ನ ಸೇವೆ ಸಲ್ಲಿಸುತ್ತಿತ್ತು.
ಸಾಂದರ್ಭಿಕ ಚಿತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.