ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಬಳಿಕ ಠಾಕೂರ್ ಮೊದಲ ಪ್ರತಿಕ್ರಿಯೆ

By Suvarna Web DeskFirst Published Jan 2, 2017, 11:21 AM IST
Highlights

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬಳಿಕ, ನಿವೃತ್ತ ನ್ಯಾಯಾಧೀಶರಡಿಯಲ್ಲಿ ಬಿಸಿಸಿಐ ಚೆನ್ನಾಗಿ ಕೆಲಸ ಮಾಡಬಹುದು ಎಂದು  ಸುಪ್ರೀಂಕೋರ್ಟ್ ಗೆ ಅನ್ನಿಸಿದರೆ ನನ್ನ ಕಡೆಯಿಂದ ಅವರಿಗೆ ಆಲ್ ದಿ ಬೆಸ್ಟ್ ಎಂದು ಠಾಕೂರ್ ಹೇಳಿದ್ದಾರೆ.

ನವದೆಹಲಿ (ಜ. 02): ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬಳಿಕ, ನಿವೃತ್ತ ನ್ಯಾಯಾಧೀಶರಡಿಯಲ್ಲಿ ಬಿಸಿಸಿಐ ಚೆನ್ನಾಗಿ ಕೆಲಸ ಮಾಡಬಹುದು ಎಂದು  ಸುಪ್ರೀಂಕೋರ್ಟ್ ಗೆ ಅನ್ನಿಸಿದರೆ ನನ್ನ ಕಡೆಯಿಂದ ಅವರಿಗೆ ಆಲ್ ದಿ ಬೆಸ್ಟ್ ಎಂದು ಠಾಕೂರ್ ಹೇಳಿದ್ದಾರೆ.

ನಾನು ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ನನಗೆ ನನ್ನ ವೈಯಕ್ತಿಕ ಯುದ್ಧವಲ್ಲ ಬದಲಿಗೆ ಬಿಸಿಸಿಐ ಸ್ವಾಯತ್ತತೆಯ ಜೊತೆಗಿನ ಯುದ್ಧ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

Latest Videos

ಕಳೆದ ಕೆಲವರ್ಷಗಳಿಂದ ಭಾರತೀಯ ಕ್ರಿಕೇಟ್ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯನ್ನು ಕಂಡಿದೆ. ಬಿಸಿಸಿಐ ಉತ್ತಮ ನಿರ್ವಹಣೆ ಮಾಡುತ್ತಿದೆ. ರಾಜ್ಯ ಅಸೋಸಿಯೇಶನ್ ಬಿಸಿಸಿಐ ಸಹಾಯದಿಂದ ಉತ್ತಮ ಮೂಲಭೂತ ಸೌಕರ್ಯ ಹಾಗೂ ನಿರ್ವಹಣೆಯನ್ನು ಹೊಂದಿದೆ ಎಂದು ಮುಖ್ಯ ನ್ಯಾ. ಟಿ.ಎಸ್ ಠಾಕೂರ್ ಹೇಳಿದ್ದರು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

 

My statement on the Supreme Court @BCCI verdict today. pic.twitter.com/4zZf44hTgf

— Anurag Thakur (@ianuragthakur) January 2, 2017
click me!